ಇಂಡಿಯಾ ಕೂಟ ಗೆದ್ದರೆ ಶೇ.70ರ ಮೀಸಲು ಮಿತಿ ನಿಯಮ ರದ್ದು: ರಾಹುಲ್‌ ಗಾಂಧಿ

| Published : Feb 06 2024, 01:40 AM IST / Updated: Feb 06 2024, 08:25 AM IST

Rahul Gandhi
ಇಂಡಿಯಾ ಕೂಟ ಗೆದ್ದರೆ ಶೇ.70ರ ಮೀಸಲು ಮಿತಿ ನಿಯಮ ರದ್ದು: ರಾಹುಲ್‌ ಗಾಂಧಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಗೆದ್ದು ಅಧಿಕಾರ ರಚಿಸಿದರೆ ಮೀಸಲಾತಿಗೆ ಶೇ.50ರ ಮಿತಿಯನ್ನು ತೆಗೆಯುವುದಾಗಿ ತಿಳಿಸಿದ್ದಾರೆ.

ರಾಂಚಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟವು ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಮೀಸಲಾತಿ ಮೇಲಿನ ಶೇ.50ರಷ್ಟು ಮಿತಿಯನ್ನು ತೆಗೆದು ಹಾಕಲಾಗುವುದು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ.

ಉತ್ತರಾಖಂಡದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ನ್ಯಾಯ ಯಾತ್ರೆ ವೇಳೆ ಇಲ್ಲಿನ ಶಹೀದ್‌ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್‌ ‘ಈ ಬಾರಿಯ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಅಸ್ತಿತ್ವದಲ್ಲಿರುವ ಮೀಸಲಾತಿ ಮೇಲಿನ ಶೇ.50ರಷ್ಟು ಮಿತಿಯ ಪ್ರಮಾಣವನ್ನು ತೆಗೆದು ಹಾಕಲಾಗುವುದು’ ಎಂದಿದ್ದಾರೆ.

ಯಾವುದೇ ವರ್ಗಕ್ಕೆ ಮೀಸಲಾತಿ ನೀಡುವುದಕ್ಕೆ ಮಿತಿ ಇದೆ. ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡುವಂತಿಲ್ಲ ಎಂದು ಸದ್ಯ ಕಾನೂನಿದೆ. 

ಈ ಕಾನೂನನ್ನು ತಿದ್ದುಪಡಿ ಮಾಡುವ ಮೂಲಕ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ. ಅಂದರೆ ಶೇ.50ಕ್ಕಿಂತ ಹೆಚ್ಚಿನ ಮೀಸಲಾತಿಯನ್ನು ‘ಇಂಡಿಯಾ’ ಸರ್ಕಾರ ನೀಡುತ್ತದೆ ಎಂದು ಗಾಂಧಿ ಹೇಳಿದ್ದಾರೆ.