ಸಾರಾಂಶ
ಬ್ರಿಟಿಷ್ ರಾಕ್ ಬ್ಯಾಂಡ್ ಕೋಲ್ಡ್ ಪ್ಲೇ ಆಯೋಜಿಸಿರುವ ಸಂಗೀತ ಕಾರ್ಯಕ್ರಮ ಹಾಗೂ ಗಾಯಕ ದಲ್ಜೀತ್ ದೊಸಾಂಜ್ ಅವರ ದಿಲ್ಲುಮಿನಾಟಿ ಕಾರ್ಯಕ್ರಮಗಳ ಅಕ್ರಮ ಟಿಕೆಟ್ ಮಾರಾಟದ ಸಂಬಂಧ ದೆಹಲಿ, ಮುಂಬೈ, ಜೈಪುರ, ಚಂಡೀಗಢ ಹಾಗೂ ಬೆಂಗಳೂರಿನ ಕೆಲ ಪ್ರದೇಶಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿದೆ.
ನವದೆಹಲಿ: ಬ್ರಿಟಿಷ್ ರಾಕ್ ಬ್ಯಾಂಡ್ ಕೋಲ್ಡ್‌ಪ್ಲೇ ಆಯೋಜಿಸಿರುವ ಸಂಗೀತ ಕಾರ್ಯಕ್ರಮ ಹಾಗೂ ಗಾಯಕ ದಲ್ಜೀತ್ ದೊಸಾಂಜ್ ಅವರ ದಿಲ್ಲುಮಿನಾಟಿ ಕಾರ್ಯಕ್ರಮಗಳ ಅಕ್ರಮ ಟಿಕೆಟ್ ಮಾರಾಟದ ಸಂಬಂಧ ದೆಹಲಿ, ಮುಂಬೈ, ಜೈಪುರ, ಚಂಡೀಗಢ ಹಾಗೂ ಬೆಂಗಳೂರಿನ ಕೆಲ ಪ್ರದೇಶಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿದೆ.
ಕಾರ್ಯಕ್ರಮಗಳ ಪಾಲುದಾರರಾದ ಬುಕ್‌ಮೈಶೋ ಹಾಗೂ ಝೊಮ್ಯಾಟೋ ಲೈವ್‌ನಲ್ಲಿ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿದ್ದು, ಅಕ್ರಮ ಮಾರಾಟದ ಶಂಕೆ ವ್ಯಕ್ತವಾಗಿತ್ತು. ಅಂತೆಯೇ ನಕಲಿ ಟಿಕೆಟ್ ಹಾಗೂ ಅಧಿಕ ದರದಲ್ಲಿ ಟಿಕೆಟ್ ಮಾರಾಟದ ಪ್ರಕರಣಗಳ ಕುರಿತು ದೂರುಗಳು ದಾಖಲಾಗಿದ್ದವು.
ಈ ಸಂಬಂಧ 5 ನಗರಗಳ 13 ಕಡೆಗಳಲ್ಲಿ ಇಡಿ ದಾಳಿ ನಡೆಸಿದ್ದು, ಮೊಬೈಲ್, ಲ್ಯಾಪ್‌ಟಾಪ್, ಸಿಮ್‌ಗಳನ್ನು ವಶಪಡಿಸಿಕೊಂಡಿದೆ. ನಕಲಿ ಟಿಕೆಟ್‌ಗಳು ಇನ್ಸ್‌ಟಾಗ್ರಾಂ, ವಾಟ್ಸಪ್ ಹಾಗೂ ಟೆಲಿಗ್ರಾಂಗಳಲ್ಲೂ ಮಾರಾಟವಾಗಿದ್ದು ತಿಳಿದುಬಂದಿದೆ.
ಕೋಲ್ಡ್‌ಪ್ಲೇ ಕಾರ್ಯಕ್ರಮ 2025ರ ಜನವರಿಯಲ್ಲಿ ಮುಂಬೈನಲ್ಲಿ ನಡೆಯಲಿದ್ದು, ದಲ್ಜೀತ್‌ರ ಕಾರ್ಯಕ್ರಮ ಅ.26, 27ರಂದು ದೆಹಲಿಯಲ್ಲಿ ನಡೆಯಲಿದೆ.