ರೈಲು ಅಪಘಾತ ಸ್ಥಳಕ್ಕೆ ಬೈಕ್‌ನಲ್ಲಿ ಬಂದ ವೈಷ್ಣವ್‌

| Published : Jun 18 2024, 12:54 AM IST / Updated: Jun 18 2024, 05:25 AM IST

ರೈಲು ಅಪಘಾತ ಸ್ಥಳಕ್ಕೆ ಬೈಕ್‌ನಲ್ಲಿ ಬಂದ ವೈಷ್ಣವ್‌
Share this Article
  • FB
  • TW
  • Linkdin
  • Email

ಸಾರಾಂಶ

  ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್‌ ರೈಲು ಡಿಕ್ಕಿ ಹೊಡೆದು ಭೀಕರ ರೈಲ್ವೆ ಅಪಘಾತ ನಡೆದ ಸ್ಥಳಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿದ್ದಾರೆ.ಅವಘಡ ಸಂಭವಿಸಿದ ಸ್ಥಳದಲ್ಲಿ ರಸ್ತೆ ಕಿರಿದಾಗಿದ್ದ ಕಾರಣ, ಕೇಂದ್ರ ಸಚಿವ ಮೋಟಾರ್ ಬೈಕ್‌ನಲ್ಲಿ ಘಟನಾ ಸ್ಥಳ ತಲುಪಿದ್ದಾರೆ.

ಕೊಲ್ಕತಾ: ಪಶ್ಚಿಮ ಬಂಗಾಳದ ರಂಗಾಪಾನಿಯಲ್ಲಿ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್‌ ರೈಲು ಡಿಕ್ಕಿ ಹೊಡೆದು ಭೀಕರ ರೈಲ್ವೆ ಅಪಘಾತ ನಡೆದ ಸ್ಥಳಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿದ್ದಾರೆ.ಅವಘಡ ಸಂಭವಿಸಿದ ಸ್ಥಳದಲ್ಲಿ ರಸ್ತೆ ಕಿರಿದಾಗಿದ್ದ ಕಾರಣ, ಕೇಂದ್ರ ಸಚಿವ ಮೋಟಾರ್ ಬೈಕ್‌ನಲ್ಲಿ ಘಟನಾ ಸ್ಥಳ ತಲುಪಿದ್ದಾರೆ. 

ಈ ವೇಳೆ ದುರಂತದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಈ ಹಿಂದೆ ಒಡಿಶಾದ ಬಾಹಾನಗಾ ರೈಲು ಅಪಘಾತ ಸಂಭವಿಸಿದಾಗ ಕೂಡ ಸಚಿವ ವೈಷ್ಣವ್‌ 3 ದಿನ ಹಗಲು-ರಾತ್ರಿ ಘಟನಾ ಸ್ಥಳದಲ್ಲೇ ಇದ್ದು ಪರಿಹಾರ ಹಾಗೂ ಹಳಿ ದುರಸ್ತಿ ಕಾರ್ಯದ ಉಸ್ತುವಾರಿ ಹೊತ್ತಿದ್ದರು.

ಭಾರತದ ಕಳೆದ 3 ದಶಕದ 7 ಮಾರಣಾಂತಿಕ ರೈಲು ಅಪಘಾತಗಳು ಇಲ್ಲಿವೆ. 2023: ಒಡಿಶಾದ ಬಾಲಸೋರ್‌ನಲ್ಲಿ ತ್ರಿವಳಿ ರೈಲು ಅಪಘಾತದಲ್ಲಿ 300 ಜನರ ಸಾವು, 1,000 ಕ್ಕೂ ಹೆಚ್ಚು ಜನರಿಗೆ ಗಾಯ 

2016: ಉತ್ತರ ಪ್ರದೇಶದ ಕಾನ್ಪುರ ಬಳಿ ಇಂದೋರ್-ಪಟನಾ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿ 150 ಪ್ರಯಾಣಿಕರ ಸಾವು

2010: ಪಶ್ಚಿಮ ಬಂಗಾಳದಲ್ಲಿ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ: 146 ಜನರು ಸಾವು

2002: ಕೋಲ್ಕತ್ತಾ-ನವದೆಹಲಿ ರಾಜಧಾನಿ ಧಬಿ ನದಿಯಲ್ಲಿ ಮುಳುಗಿ 120 ಜನರು ಸಾವು

1999: ಪ. ಬಂಗಾಳದಲ್ಲಿ 2 ರೈಲುಗಳ ನಡುವೆ ಡಿಕ್ಕಿ: 285 ಜನರ ಸಾವು

1998: ಪಂಜಾಬ್‌ನಲ್ಲಿ ಹಳಿ ತಪ್ಪಿದ ರೈಲಿಗೆ ಸೀಲ್ಡಾ ಎಕ್ಸ್‌ಪ್ರೆಸ್ ಡಿಕ್ಕಿ: 210 ಜನ ಸಾವು

1995: ಆಗ್ರಾ ಬಳಿಯ ಫಿರೋಜಾಬಾದ್‌ನಲ್ಲಿ ಪುರುಷೋತ್ತಮ್ ಎಕ್ಸ್‌ಪ್ರೆಸ್‌ಗೆ ಕಾಳಿಂದಿ ಎಕ್ಸ್‌ಪ್ರೆಸ್ ಡಿಕ್ಕಿ, 300 ಜನರ ಸಾವು