ಸಾರಾಂಶ
ರೈಲ್ವೆಯ ಎಲ್ಲಾ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ‘ಸ್ವರೈಲ್’ ಎಂಬ ಹೊಸ ಆ್ಯಪ್ ಅನ್ನು ರೈಲ್ವೆ ಸಚಿವಾಲಯ ಪರೀಕ್ಷಾರ್ಥವಾಗಿ ಶುಕ್ರವಾರ ಬಿಡುಗಡೆಗೊಳಿಸಿದೆ.
ನವದೆಹಲಿ: ರೈಲ್ವೆಯ ಎಲ್ಲಾ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ‘ಸ್ವರೈಲ್’ ಎಂಬ ಹೊಸ ಆ್ಯಪ್ ಅನ್ನು ರೈಲ್ವೆ ಸಚಿವಾಲಯ ಪರೀಕ್ಷಾರ್ಥವಾಗಿ ಶುಕ್ರವಾರ ಬಿಡುಗಡೆಗೊಳಿಸಿದೆ.
ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಟಿಕೆಟ್ ಬುಕಿಂಗ್, ಪ್ಲಾಟ್‌ಫಾರ್ಮ್ ಹಾಗೂ ಪಾರ್ಸೆಲ್ ಬುಕಿಂಗ್ ಮಾಡಲು, ರೈಲುಗಳ ಕುರಿತ ಮಾಹಿತಿ ಪಡೆಯಲು, ಸೇವೆಗಳ ಕುರಿತ ದೂರುಗಳನ್ನು ಸಲ್ಲಿಸುವ ವೇದಿಕೆಯಾದ ರೈಲ್ ಮದದ್ ಸೇರಿದಂತೆ ಅನೇಕ ಸೇವೆಗಳನ್ನು ಈ ಆ್ಯಪ್‌ನಲ್ಲಿ ಪಡೆಯಬಹುದಾಗಿದೆ.
ಮೊದಲಿಗೆ 1000 ಜನರಿಗೆ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಅವಕಾಶ ನೀಡಲಾಗಿದೆ. ಬಳಕೆದಾರರಿಂದ ದೊರಕುವ ಪ್ರತಿಕ್ರಿಯೆಯ ಆಧಾರದಲ್ಲಿ ಮತ್ತೂ 10 ಸಾವಿರ ಜನರಿಗೆ ಬಳಸಲು ಅನುವು ಮಾಡಿಕೊಡಲಾಗುವುದು ಹಾಗೂ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು.