ರಾಜಸ್ಥಾನದಲ್ಲಿ 1.33 ಕೋಟಿ ಜನರಿಂದ ಸೂರ್ಯ ನಮಸ್ಕಾರ: ವಿಶ್ವದಾಖಲೆ

| Published : Feb 16 2024, 01:51 AM IST / Updated: Feb 16 2024, 12:57 PM IST

ರಾಜಸ್ಥಾನದಲ್ಲಿ 1.33 ಕೋಟಿ ಜನರಿಂದ ಸೂರ್ಯ ನಮಸ್ಕಾರ: ವಿಶ್ವದಾಖಲೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಸ್ಥಾನದಲ್ಲಿ 1.33 ಕೋಟಿ ಜನರು ಏಕಕಾಲದಲ್ಲಿ ಸೂರ್ಯ ನಮಸ್ಕಾರ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಜೈಪುರ: ರಾಜಸ್ಥಾನದಲ್ಲಿ ಗುರುವಾರ ಏಕಕಾಲದಲ್ಲಿ 1.14 ಕೋಟಿ ವಿದ್ಯಾರ್ಥಿಗಳೂ ಸೇರಿ 1.33 ಕೋಟಿಗೂ ಅಧಿಕ ಮಂದಿ ಸೂರ್ಯ ನಮಸ್ಕಾರ ಮಾಡುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದ್ದಾರೆ.

ರಥಸಪ್ತಮಿ ನಿಮಿತ್ತ 88,974 ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಸೂರ್ಯ ನಮಸ್ಕಾರ ಆಯೋಜಿಸಲಾಗಿತ್ತು.

ಈ ವೇಳೆ 1.14 ಕೋಟಿ ಮಕ್ಕಳನ್ನೂ ಒಳಗೊಂಡಂತೆ 1.33 ಕೋಟಿಗೂ ಅಧಿಕ ಮಂದಿಯಿಂದ ಗುರುವಾರ ಬೆಳಗ್ಗೆ 10:30ರಿಂದ 11 ಗಂಟೆಯ ನಡುವೆ ಏಕಕಾಲದಲ್ಲಿ ಸೂರ್ಯ ನಮಸ್ಕಾರ ಮಾಡಿದರು.

ಈ ವೇಳೆ ಹಾಜರಿದ್ದ ಲಂಡನ್‌ ವಿಶ್ವದಾಖಲೆ ಸಂಸ್ಥೆಯ ರಾಜಸ್ಥಾನದ ಪ್ರತಿನಿಧಿ ಪ್ರಥಮ್‌ ಭಲ್ಲಾ ಅವರು, ಶಿಕ್ಷಣ ಸಚಿವ ಮದನ್‌ ದಿಲಾವರ್‌ ಅವರಿಗೆ ವಿಶ್ವದಾಖಲೆಯ ಪ್ರಮಾಣ ಪತ್ರ ವಿತರಿಸಿದರು.