ಸಾರಾಂಶ
ವೈಯಕ್ತಿಕ ಕಾರಣಕ್ಕೆ ಚುನಾವಣಾ ಆಯುಕ್ತರಾಗಿದ್ದ ಅರುಣ್ ಗೋಯೆಲ್ ರಾಜೀನಾಮೆ ನೀಡಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ನವದೆಹಲಿ: ಚುನಾವಣಾ ಆಯುಕ್ತರ ಸ್ಥಾನಕ್ಕೆ ಅರುಣ್ ಗೋಯಲ್ ದಿಢೀರ್ ರಾಜೀನಾಮೆ ನೀಡಿದ್ದು, ವೈಯಕ್ತಿಕ ಕಾರಣಕ್ಕೆ. ಅವರ ಖಾಸಗಿತನವನ್ನು ನಾವು ಗೌರವಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಉತ್ತರಿಸಿ ಜಾಣ್ಮೆತನ ತೋರಿದ್ದಾರೆ.
ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ವೈಯಕ್ತಿಕ ಕಾರಣಗಳಿಂದ ಅರುಣ್ ಗೋಯಲ್ ರಾಜೀನಾಮೆ ನೀಡಿದ್ದಾರೆ. ಅವರ ವೈಯಕ್ತಿಕ ನಿರ್ಧಾರ ನಾವು ಗೌರವಿಸುತ್ತೇವೆ ಎಂದು ಅವರು ಹೇಳಿದರು.
ಮಾ.9 ರಂದು ಅರುಣ್ ಗೋಯಲ್ ಚುನಾವಣಾ ಆಯುಕ್ತರ ಸ್ಥಾನಕ್ಕೆ ನೀಡಿದ್ದರು. ರಾಜೀವ್ ಜತೆಗೆ ಅವರು ಜಟಾಪಟಿ ಮಾಡಿಕೊಂಡು ಹುದ್ದೆ ಬಿಟ್ಟಿದ್ದಾರೆ ಎನ್ನಲಾಗಿತ್ತು.