ರಾಮಮಂದಿರಕ್ಕೆ 2500 ವರ್ಷಕ್ಕೊಮ್ಮೆ ಆಗುವ ಪ್ರಬಲ ಭೂಕಂಪ ತಡೆವ ಶಕ್ತಿ

| Published : Jan 29 2024, 01:31 AM IST

ಸಾರಾಂಶ

ಅಯೋಧ್ಯಾ ರಾಮಮಂದಿರವನ್ನು ಪ್ರಬಲ ಭೂಕಂಪವನ್ನೂ ತಡೆದುಕೊಳ್ಳುವಷ್ಟು ಗಟ್ಟಿಯಾಗಿ ತಳಪಾಯ ಹಾಕಿ ನಿರ್ಮಿಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ನವದೆಹಲಿ: ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿತ ರಾಮಮಂದಿರ 1000 ವರ್ಷಗಳವರೆಗೆ ಯಾವುದೇ ರಿಪೇರಿ ಬಯಸುವುದಿಲ್ಲ ಎಂದು ಈಗಾಗಲೇ ವಿಜ್ಞಾನಿಗಳು ಹೇಳಿದ್ದರು.

ಆದರೆ ಈ ಮಂದಿರ, 2500 ವರ್ಷಗಳಿಗೊಮ್ಮೆ ಸಂಭವಿಸುವ ಅತಿ ಭೀಕರ ಭೂಕಂಪವನ್ನು ತಡೆಯುವ ಶಕ್ತಿ ಹೊಂದಿದೆ ಎಂದು ರೂರ್ಕಿಯ ಸೆಂಟ್ರಲ್‌ ಬಿಲ್ಡಿಂಗ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ ವಿಜ್ಙಾನಿ ದೇವದತ್ತ ಘೋಷ್‌ ಹೇಳಿದ್ದಾರೆ.

ಅಯೋಧ್ಯೆ ಮಂದಿರ ನಿರ್ಮಿಸಲಾದ ಸ್ಥಳ, ಆ ಸ್ಥಳದ ಭೂಭೌತ ಗುಣಲಕ್ಷಣಗಳು ಮತ್ತು ಭೂತಾಂತ್ರಿಕ ವಿಶ್ಲೇಷಣೆ, ತಳಪಾಯದ ವಿನ್ಯಾಸಗಳನ್ನು ಅಧ್ಯಯನ ಮಾಡಿದ ಬಳಿಕ ಇಂಥದ್ದೊಂದು ಅಂಶ ದೃಢಪಟ್ಟಿದೆ ಎಂದು ಘೋಷ್‌ ಹೇಳಿದ್ದಾರೆ.