ಆಫ್ರಿಕಾದ 10 ದೇಶಗಳ ವ್ಯಾಪ್ತಿಯಲ್ಲಿ ಹಬ್ಬಿಕೊಂಡಿರುವ ಸಹಾರ ಮರುಭೂಮಿಯಲ್ಲಿ 50 ವರ್ಷದ ದಾಖಲೆ ಪ್ರವಾಹ!

| Published : Oct 13 2024, 01:02 AM IST / Updated: Oct 13 2024, 04:37 AM IST

ಆಫ್ರಿಕಾದ 10 ದೇಶಗಳ ವ್ಯಾಪ್ತಿಯಲ್ಲಿ ಹಬ್ಬಿಕೊಂಡಿರುವ ಸಹಾರ ಮರುಭೂಮಿಯಲ್ಲಿ 50 ವರ್ಷದ ದಾಖಲೆ ಪ್ರವಾಹ!
Share this Article
  • FB
  • TW
  • Linkdin
  • Email

ಸಾರಾಂಶ

ಆಫ್ರಿಕಾದ 10 ದೇಶಗಳ ವ್ಯಾಪ್ತಿಯಲ್ಲಿ ಹಬ್ಬಿಕೊಂಡಿರುವ ಸಹಾರ ಮರುಭೂಮಿಯಲ್ಲಿ ಇತ್ತೀಚೆಗೆ ಸುರಿದ ಮಳೆ, ಪ್ರವಾಹಕ್ಕೆ ಕಾರಣವಾಗಿದೆ. ಇದನ್ನು 50 ವರ್ಷದ ದಾಖಲೆ ಪ್ರವಾಹ ಎಂದು ಹೇಳಲಾಗಿದೆ.

ಜೋಹಾನ್ಸ್‌ಬರ್ಗ್‌: ಆಫ್ರಿಕಾದ 10 ದೇಶಗಳ ವ್ಯಾಪ್ತಿಯಲ್ಲಿ ಹಬ್ಬಿಕೊಂಡಿರುವ ಸಹಾರ ಮರುಭೂಮಿಯಲ್ಲಿ ಇತ್ತೀಚೆಗೆ ಸುರಿದ ಮಳೆ, ಪ್ರವಾಹಕ್ಕೆ ಕಾರಣವಾಗಿದೆ. ಇದನ್ನು 50 ವರ್ಷದ ದಾಖಲೆ ಪ್ರವಾಹ ಎಂದು ಹೇಳಲಾಗಿದೆ.

ವಿಶ್ವದಲ್ಲೇ ಅತ್ಯಂತ ಒಣ ಮತ್ತು ಶುಷ್ಕ ಪ್ರದೇಶವೆಂಬ ಕುಖ್ಯಾತಿ ಹೊಂದಿರುವ ಈ ಮರುಭೂಮಿಯ ಕೆಲ ಪ್ರದೇಶಗಳಲ್ಲಿ ಕಳೆದ ತಿಂಗಳ 2 ದಿನಗಳ ಅವಧಿಯಲ್ಲಿ ಸುರಿದ ಮಳೆಯು ಇಡೀ ಪ್ರದೇಶದ ಚಿತ್ರಣವನ್ನೇ ಬದಲಿಸಿದೆ.

ಈ ಪ್ರದೇಶಗಳಲ್ಲಿ ವಾರ್ಷಿಕ 25 ಸೆಂ.ಮೀ ಗಿಂತಲೂ ಕಡಿಮೆ ಮಳೆ ಬೀಳುತ್ತದೆ. ಆದರೆ ಇಷ್ಟು ಮಳೆ ಕೇವಲ 2 ದಿನಗಳ ಅವಧಿಯಲ್ಲಿ ಸುರಿದಿದೆ. ಹೀಗಾಗಿ ಇರಿಕ್ಯು ಸರೋವರ 50 ವರ್ಷಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ತುಂಬಿದೆ. ಅಷ್ಟು ಮಾತ್ರವಲ್ಲ, ಮರಳಿನ ದಿಬ್ಬದ ಅಕ್ಕಪಕ್ಕದ ಗುಂಡಿಗಳಲೆಲ್ಲಾ ನೀರು ತುಂಬಿಕೊಂಡು ಸುಂದರ ದೃಶ್ಯಗಳನ್ನು ಸೃಷ್ಟಿಸಿದೆ. ನೀರಿನ ನಡುವೆ ಅಲ್ಲಿ ಇರುವ ಪಾಮ್‌ ಮರಗಳು ಪರಿಸರವನ್ನು ಮತ್ತಷ್ಟು ಅದ್ಭುತಗೊಳಿಸಿವೆ. ದಕ್ಷಿಣದ ಮೆರಾಕ್ಕೋದ ಮೆರ್‌ಝೌಗಾ ಸಮೀಪದ ಇಂಥ ದೃಶ್ಯ ಕಂಡುಬಂದಿದೆ.

‘ಕಳೆದ 30-50 ವರ್ಷಗಳಲ್ಲೇ ಇಂಥ ಮಳೆಯನ್ನು ನಾವು ನೋಡಿರಲಿಲ್ಲ’ ಎಂದು ಸ್ಥಳೀಯರು ಹೇಳಿದ್ದಾರೆ. ಹಲವು ಕಡೆ ನೀರು ಪ್ರವಾಹದ ರೀತಿಯಲ್ಲಿ ಹರಿದು ಹೋಗುತ್ತಿರುವ ದೃಶ್ಯಗಳು ಪ್ರಕೃತಿಕ ವಿಸ್ಮಯಕ್ಕೆ ಸಾಕ್ಷಿಯಾಗಿವೆ.

ಮಳೆಗೆ ಕಾರಣ ಏನು?:

‘ಸಮಶೀತೋಷ್ಣ ಚಂಡಮಾರುತದ ಪರಿಣಾಮ ಇಂಥ ಮಳೆ ಸುರಿದಿದೆ. ಜಾಗತಿಕ ಹವಾಮಾನ ಬದಲಾವಣೆಯ ಪರಿಣಾಮಗಳ ಕೂಡಾ ಇಂಥ ಬೆಳವಣಿಗೆಗೆ ಕಾರಣ’ ಎಂದು ವಿಜ್ಞಾನಿಗಳು ಹೇಳಿದ್ದಾರೆ.92 ಲಕ್ಷ ಚದರ ಕಿ.ಮೀ ವ್ಯಾಪ್ತಿಯಲ್ಲಿ ಸಹಾರಾ ಮರುಭೂಮಿ ಹರಡಿಕೊಂಡಿದೆ.