ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷದ ಕೆಲಸಗಳು ಅತ್ಯುನ್ನತವಾಗಿದೆ. ಅವರು ತೆಗೆದುಕೊಂಡು ಬಂದಿರುವ ಯೋಜನೆಗಳು ಶ್ಲಾಘನೀಯ ಎಂದು ನಟಿ ರಶ್ಮಿಕಾ ಮಂದಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷದ ಕೆಲಸಗಳು ಅತ್ಯುನ್ನತವಾಗಿದೆ. ಅವರು ತೆಗೆದುಕೊಂಡು ಬಂದಿರುವ ಯೋಜನೆಗಳು ಶ್ಲಾಘನೀಯ ಎಂದು ನಟಿ ರಶ್ಮಿಕಾ ಮಂದಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ರಶ್ಮಿಕಾ,‘ ನವಿ ಮುಂಬೈನಿಂದ ಮುಂಬೈಗೆ ಸಂಪರ್ಕ ಕಲ್ಪಿಸುವ ಅಟಲ್ ಸೇತುವೆ 2 ತಾಸಿನ ಸಮಯವನ್ನು ಉಳಿಸಿದೆ.
ಇದರಿಂದಾಗಿ 20 ನಿಮಿಷದಲ್ಲಿ ತಲುಪಬಹುದಾಗಿದೆ. ಇದರ ಜೊತೆಗೆ ಮುಂಬೈ ಬೆಂಗಳೂರು ಸೇರಿದಂತೆ ವಿವಿಧ ಹೆದ್ದಾರಿಗಳು ಉನ್ನತಗೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು. ಜೊತೆಗೆ ಈಗಿನ ಯುವಜನತೆ ತುಂಬಾ ವೇಗವಾಗಿ ಬೆಳಯುತ್ತಿದ್ದು, ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.