ರಾಷ್ಟ್ರಪತಿ ಭವನಕ್ಕೆ ಶೇ.47.5ರಷ್ಟು ಅನುದಾನ ಹೆಚ್ಚಳ

| Published : Feb 02 2024, 01:03 AM IST / Updated: Feb 02 2024, 12:08 PM IST

Rashtrapati Bhavan

ಸಾರಾಂಶ

ರಾಷ್ಟ್ರಪತಿ ಭವನಕ್ಕೆ ಪ್ರಸಕ್ತ ಬಜೆಟ್‌ನಲ್ಲಿ ಬರೋಬ್ಬರಿ 144.18 ಕೋಟಿ ರು. ಹಣ ಮಂಜೂರು ಮಾಡಲಾಗಿದೆ.

2024-25ನೇ ಸಾಲಿನ ಆಯವ್ಯಯದಲ್ಲಿ ರಾಷ್ಟ್ರಪತಿ ಭವನಕ್ಕೆ ಶೇ.47.5ರಷ್ಟು ಅನುದಾನ ಹೆಚ್ಚಳ ಮಾಡಲಾಗಿದ್ದು ಒಟ್ಟು 144.18 ಕೋಟಿ ರು. ಮಂಜೂರು ಮಾಡಲಾಗಿದೆ. 

ಇದರಲ್ಲಿ ಪ್ರಮುಖವಾಗಿ ರಾಷ್ಟ್ರಪತಿಗಳ ಸಂಬಳ ಮತ್ತು ಭತ್ಯೆಗಾಗಿ 60 ಲಕ್ಷ ರು. ಮೀಸಲಿಡಲಾಗಿದೆ. ಜೊತೆಗೆ ರಾಷ್ಟ್ರಪತಿಯವರ ಕಾರ್ಯಾಲಯ ವೆಚ್ಚಕ್ಕೆ 90.87 ಕೋಟಿ ರು. ನೀಡಲಾಗಿದೆ. 

ಇದರಲ್ಲಿ ರಾಷ್ಟ್ರಪತಿ ಭವನದ ಹಿಡಿಲ್ಲ್ಲಿರುವ ರಾಜೇಂದ್ರ ಪ್ರಸಾದ್‌ ಕೇಂದ್ರೀಯ ವಿದ್ಯಾಲಯಕ್ಕೆ ನೀಡುವ ಅನುದಾನವೂ ಸೇರಿದೆ. 

ಜೊತೆಗೆ ರಾಷ್ಟ್ರಪತಿ ಭವನದ ಇತರೆ ವೆಚ್ಚಗಳಿಗಾಗಿ 52.71 ಕೋಟಿ ರು. ವೆಚ್ಚ ಮೀಸಲಿಡಲಾಗಿದ್ದು, ಇದರಲ್ಲಿ ರಾಷ್ಟ್ರಪತಿ ಭವನದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಸಂಬಳ ಮತ್ತು ಸಾಮಾನು ಸರಂಜಾಮುಗಳನ್ನು ಖರೀದಿಸಲು ಬಳಕೆ ಮಾಡುವುದಕ್ಕಾಗಿ ಹಣ ಮಂಜೂರು ಮಾಡಲಾಗಿದೆ.