ಬಚ್ಚನ್‌ ನಾಯಕತ್ವದ ಸಿನೆಮಾಕೂಡಾ ನಿರ್ಮಿಸಿದ್ದರು ರತನ್‌

| Published : Oct 11 2024, 11:52 PM IST

ಬಚ್ಚನ್‌ ನಾಯಕತ್ವದ ಸಿನೆಮಾಕೂಡಾ ನಿರ್ಮಿಸಿದ್ದರು ರತನ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ಪಿನಿಂದ ಹಿಡಿದು ಸಾಫ್ಟ್‌ವೇರ್‌ತನಕ ಎಲ್ಲಾ ಉದ್ಯಮಗಳಲ್ಲೂ ಬೇರೂರಿರುವ ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ ರತನ್‌ ಟಾಟಾ ಒಂದೊಮ್ಮೆ ಸಿನೆಮಾ ರಂಗವನ್ನೂ ಪ್ರವೇಶಿಸಿದ್ದರು.

ಮುಂಬೈ: ಉಪ್ಪಿನಿಂದ ಹಿಡಿದು ಸಾಫ್ಟ್‌ವೇರ್‌ತನಕ ಎಲ್ಲಾ ಉದ್ಯಮಗಳಲ್ಲೂ ಬೇರೂರಿರುವ ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ ರತನ್‌ ಟಾಟಾ ಒಂದೊಮ್ಮೆ ಸಿನೆಮಾ ರಂಗವನ್ನೂ ಪ್ರವೇಶಿಸಿದ್ದರು. 2000ನೇ ಇಸವಿಯಲ್ಲಿ ಟಾಟಾ ಇನ್ಫೋಮೀಡಿಯಾ ಲಿಮಿಟೆಡ್ ಕಂಪನಿ ಅಡಿಯಲ್ಲಿ ಅಮಿತಾಭ್‌ ಬಚ್ಚನ್‌ ನಾಯಕರಾಗಿ ನಟಿಸಿದ್ದ ‘ಏತ್‌ಬಾರ್‌’ ಎಂಬ ಸಿನೆಮಾಕ್ಕೆ ರತನ್‌ ಸಹ ನಿರ್ಮಾಪಕರಾಗಿದ್ದರು. 9.5 ಕೋಟಿ ರು. ವೆಚ್ಚದಲ್ಲಿ ಚಿತ್ರ ನಿರ್ಮಿಸಲಾಗಿತ್ತು. ಆದರೆ ಸಿನೆಮಾ ಕೇವಲ 7.5 ಕೋಟಿ ರು. ಸಂಪಾದಿಸಿ ಸೋಲು ಕಂಡಿತ್ತು. ಅದಾದ ಬಳಿಕ ಮತ್ತೆಂದೂ ಅವರು ಚಿತ್ರ ನಿರ್ಮಾಣದ ಕಡೆಗೆ ಹೆಜ್ಜೆ ಹಾಕಿರಲಿಲ್ಲ.

ಮಾಜಿ ಪ್ರೇಯಸಿ ಸಿಮಿ ಭಾವುಕ ವಿದಾಯನೀವು ಹೋಗಿದ್ದೀರಿ ಎಂದು ಅವರು ಹೇಳುತ್ತಾರೆ. ನಿಮ್ಮ ಅಗಲಿಕೆಯನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ. ವಿದಾಯ ನನ್ನ ಸ್ನೇಹಿತ... ಇದು ರತನ್ ಟಾಟಾರ ಮಾಜಿ ಗೆಳತಿ ಸಿಮಿ ಗರೆವಾಲ್‌ ಅಗಲಿದ ಟಾಟಾ ದಿಗ್ಗಜನಿಗೆ ಬರೆದ ಭಾವುಕ ಸಾಲುಗಳು. ರತನ್ ಟಾಟಾ ಮಾಜಿ ಪ್ರೇಯಸಿ ಸಿಮಿ ಗರೆವಾಲ್ ಸಾಮಾಜಿಕ ಜಾಲತಾಣದಲ್ಲಿ ರತನ್ ಟಾಟಾ ಅಗಲಿಕೆಯನ್ನು ಸಹಿಸಿಕೊಳ್ಳುವುದು ಕಷ್ಟ ಎಂದು ಭಾವುಕವಾಗಿ ಪೋಸ್ಟ್‌ ಮಾಡಿದ್ದಾರೆ. ನಟಿ ಸಿಮಿ ಗರೆವಾಲ್ ಮತ್ತು ರತನ್ ಟಾಟಾ ಪ್ರೀತಿಯಲ್ಲಿದ್ದಾರೆ ಎನ್ನುವ ಸುದ್ದಿ ಜೋರಾಗಿ ಹರಿದಾಡಿತ್ತು. 2011ರ ಸಂದರ್ಶನವೊಂದರಲ್ಲಿ ಸಿಮಿ, ರತನ್‌ ಮತ್ತು ತಮ್ಮ ಪ್ರೀತಿಯ ಬಗ್ಗೆ ಒಪ್ಪಿಕೊಂಡಿದ್ದರು.