ರೇಮಂಡ್ಸ್‌ಗೆ ಸಿಂಘಾನಿಯಾ ಪತಿ, ಪತ್ನಿ ಶಾಕ್‌: ಷೇರು ಮೌಲ್ಯ₹1500 ಕೋಟಿ ಕುಸಿತ

| Published : Nov 23 2023, 01:45 AM IST

ರೇಮಂಡ್ಸ್‌ಗೆ ಸಿಂಘಾನಿಯಾ ಪತಿ, ಪತ್ನಿ ಶಾಕ್‌: ಷೇರು ಮೌಲ್ಯ₹1500 ಕೋಟಿ ಕುಸಿತ
Share this Article
  • FB
  • TW
  • Linkdin
  • Email

ಸಾರಾಂಶ

ಗೌತಮ್‌ ಸಿಂಘಾನಿಯಾ ತಮ್ಮ ಪತ್ನಿಯಿಂದ ದೂರವಾಗುವ ಸುದ್ದಿ ಪ್ರಕಟಿಸಿದ ವಿಷಯ ರೇಮಂಡ್ಸ್‌ ಕಂಪನಿಯ ಷೇರುಗಳ ಮೇಲೆ ಭಾರೀ ಪರಿಣಾಮ ಬೀರಿದೆ. ವಾರದ ಹಿಂದೆ ಗೌತಮ್‌ ಈ ವಿಷಯ ಬಹಿರಂಗಪಡಿಸಿದ ಬೆನ್ನಲ್ಲೇ, ರೇಮಂಡ್ಸ್‌ ಕಂಪನಿಯ ಷೇರು ಮೌಲ್ಯ ಶೇ.12ರಷ್ಟು ಕುಸಿತ ಕಂಡಿದೆ.

ಮುಂಬೈ: ಗೌತಮ್‌ ಸಿಂಘಾನಿಯಾ ತಮ್ಮ ಪತ್ನಿಯಿಂದ ದೂರವಾಗುವ ಸುದ್ದಿ ಪ್ರಕಟಿಸಿದ ವಿಷಯ ರೇಮಂಡ್ಸ್‌ ಕಂಪನಿಯ ಷೇರುಗಳ ಮೇಲೆ ಭಾರೀ ಪರಿಣಾಮ ಬೀರಿದೆ. ವಾರದ ಹಿಂದೆ ಗೌತಮ್‌ ಈ ವಿಷಯ ಬಹಿರಂಗಪಡಿಸಿದ ಬೆನ್ನಲ್ಲೇ, ರೇಮಂಡ್ಸ್‌ ಕಂಪನಿಯ ಷೇರು ಮೌಲ್ಯ ಶೇ.12ರಷ್ಟು ಕುಸಿತ ಕಂಡಿದೆ. ಅಂದರೆ ಕಂಪನಿಯ ಒಟ್ಟಾರೆ ಮಾರುಕಟ್ಟೆ ಮೌಲ್ಯದಲ್ಲಿ 1500 ಕೋಟಿ ರು.ನಷ್ಟು ಇಳಿಕೆಯಾಗಿದೆ. ಗೌತಮ್‌ ಸಿಂಘಾನಿಯಾ 11480 ಕೋಟಿ ರು. ಆಸ್ತಿ ಹೊಂದಿದ್ದು, ಈ ಪೈಕಿ ತಮಗೆ ಶೇ.75ರಷ್ಟು ಅಂದರೆ 8650 ಕೋಟಿ ರು. ಬೇಕು ಎಂದು ಅವರ ಪತ್ನಿ ನವಾಜ್‌ ಸಿಂಘಾನಿಯಾ ಬೇಡಿಕೆ ಇಟ್ಟಿದ್ದಾರೆ.