ಸಾರಾಂಶ
ಭಾರತದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಚಿನ್ನದ ಸಂಗ್ರಹವು ಮಹತ್ವದ ಮೈಲುಗಲ್ಲು ತಲುಪಿದ್ದು, ಇದೇ ಮೊದಲ ಬಾರಿ 100 ಶತಕೋಟಿ ಡಾಲರ್ (ಸುಮಾರು 88 ಲಕ್ಷ ಕೋಟಿ ರು.) ಮೌಲ್ಯ ತಲುಪಿದೆ ಎಂದು ಆರ್‌ಬಿಐ ದತ್ತಾಂಶಗಳು ತಿಳಿಸಿವೆ.
ಮೊದಲ ಸಲ 100 ಶತಕೋಟಿ ಡಾಲರ್ ದಾಟಿದ ಸಂಗ್ರಹನವದೆಹಲಿ: ಭಾರತದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಚಿನ್ನದ ಸಂಗ್ರಹವು ಮಹತ್ವದ ಮೈಲುಗಲ್ಲು ತಲುಪಿದ್ದು, ಇದೇ ಮೊದಲ ಬಾರಿ 100 ಶತಕೋಟಿ ಡಾಲರ್ (ಸುಮಾರು 88 ಲಕ್ಷ ಕೋಟಿ ರು.) ಮೌಲ್ಯ ತಲುಪಿದೆ ಎಂದು ಆರ್‌ಬಿಐ ದತ್ತಾಂಶಗಳು ತಿಳಿಸಿವೆ.
ಅ.10ಕ್ಕೆ ಕೊನೆಗೊಂಡ ವಾರದಲ್ಲಿ ಆರ್‌ಬಿಐ ಸಂಗ್ರಹದಲ್ಲಿರುವ ಚಿನ್ನದ ಮೌಲ್ಯ 31650 ಕೋಟಿ ರು.ನಷ್ಟು ಹೆಚ್ಚಾಗಿ 9 ಲಕ್ಷ ಕೋಟಿ ರು.ಗೆ ತಲುಪಿದೆ. ಇದರೊಂದಿಗೆ ಭಾರತದ ಒಟ್ಟು ಮೀಸಲು ಸಂಗ್ರಹದಲ್ಲಿ ಚಿನ್ನದ ಪಾಲು ಶೇ.14.7ಕ್ಕೆ ಏರಿದೆ. ಇದೇ ಅವಧಿಯಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹ 64 ಲಕ್ಷ ಕೋಟಿ ರು.ನಷ್ಟು ಇತ್ತು.2024ರಲ್ಲಿ ಆರ್‌ಬಿಐ ಒಟ್ಟಾರೆ 50 ಟನ್ ಚಿನ್ನ ಖರೀದಿ ಮಾಡಿತ್ತು. ಆದರೆ ಈ ವರ್ಷದ ಜನವರಿಯಿಂದ ಸೆಪ್ಟೆಂಬರ್ ಅವಧಿಯಲ್ಲಿ ಕೇವಲ 4 ಟನ್ ಚಿನ್ನ ಖರೀದಿ ಮಾಡಿದೆ. ಆದರೆ ಕಳೆದ ವಾರದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಕಂಡು ಒಟ್ಟಾರೆ ಚಿನ್ನದ ಮೌಲ್ಯ 31650 ಕೋಟಿ ರು.ನಷ್ಟು ಏರಿಕೆಯಾಗಿ 9 ಲಕ್ಷ ಕೋಟಿ ರು. ಗಡಿ ತಲುಪಿದೆ. ಜೊತೆಗೆ ವರ್ಷ ಚಿನ್ನದ ಬೆಲೆಯಲ್ಲಿ ಶೇ.65ರಷ್ಟು ಏರಿಕೆಯಾಗಿರುವುದರಿಂದ ಆರ್‌ಬಿಐನ ಚಿನ್ನದ ಮೌಲ್ಯದಲ್ಲಿ ಏರಿಕೆಯಾಗಿದೆ.