ಸಾರಾಂಶ
ಪೇಟಿಎಂ ಮೇಲಿನ ನಿರ್ಬಂಧ ಕ್ರಮವನ್ನು ಸಮಸ್ತ ಫಿನ್‌ಟೆಕ್ ಮೇಲಿನ ಕ್ರಮ ಎಂದು ಅಪಪ್ರಚಾರ ಮಾಡುವುದು ತಪ್ಪು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ
ಮುಂಬೈ: ಕೆವೈಸಿ ಅಕ್ರಮ ಎಸಗಿರುವ ಕಾರಣ ಮಾ.15ರಿಂದ ನಿರ್ಬಂಧಕ್ಕೆ ಒಳಗಾಗುತ್ತಿರುವ ಪೇಟಿಎಂ ಪೇಮೆಂಟ್ ಬ್ಯಾಂಕ್‌ಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ.
‘ಪೇಟಿಎಂ ಮೇಲಿನ ಕ್ರಮವು ಫಿನ್‌ಟೆಕ್ ವಲಯದ ಮೇಲೆ ಕೈಗೊಂಡ ಕ್ರಮ ಅಲ್ಲ.ನಿಯಮ ಪಾಲಿಸದ ಕಾರಣಕ್ಕಷ್ಟೇ ಪೇಟಿಎಂ ಬ್ಯಾಂಕ್ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ಒಬ್ಬ ವ್ಯಕ್ತಿ ಐಷಾರಾಮಿ ಫೆರಾರಿ ಕಾರು ಹೊಂದಿರಬಹುದು. ಜೋರಾಗಿ ಕಾರು ಓಡಿಸಬಹುದು.ಆದರೆ ಅಪಘಾತ ತಪ್ಪಿಸಲು ಸಂಚಾರ ನಿಯಮ ಪಾಲಿಸಲೇಬೇಕು’ ಎಂದು ದಾಸ್ ಟಾಂಗ್ ನೀಡಿದ್ದಾರೆ.