ಸಾರಾಂಶ
ಸತತ ಮೂರನೇ ದಿನವೂ ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆಯಾಗಿದ್ದು, ಸೋಮವಾರ ಒಂದೇ ದಿನ ಬರೋಬ್ಬರಿ 4,59,526 (4.59 ಲಕ್ಷ) ಪ್ರಯಾಣಿಕರು ದೇಶಿಯ ವಿಮಾನಗಳಲ್ಲಿ ಸಂಚರಿಸಿದ್ದಾರೆ.
ನವದೆಹಲಿ: ಸತತ ಮೂರನೇ ದಿನವೂ ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆಯಾಗಿದ್ದು, ಸೋಮವಾರ ಒಂದೇ ದಿನ ಬರೋಬ್ಬರಿ 4,59,526 (4.59 ಲಕ್ಷ) ಪ್ರಯಾಣಿಕರು ದೇಶಿಯ ವಿಮಾನಗಳಲ್ಲಿ ಸಂಚರಿಸಿದ್ದಾರೆ. ಈ ವೇಳೆ ಒಟ್ಟು 5,958 ವಿಮಾನಗಳು ದೇಶೀಯ ಸಂಚಾರ ನಡೆಸಿವೆ.
ನ.18 ರಂದು (ಶನಿವಾರ) ದಟ್ಟಣೆಯು 4,56,748, ನ.19 ರಂದು (ಭಾನುವಾರ) 4,56,910 ಮತ್ತು ನ. 20 ರಂದು (ಸೋಮವಾರ) ಮತ್ತೆ 4,59,526 ದಾಖಲೆಯ ಸಂಚಾರವಾಗಿದೆ. ಕಳೆದ 2022ರ ನ.20 ರಂದು ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆ 3,94,007 ಮತ್ತು ವಿಮಾನ ಚಲನೆಗಳ ಸಂಖ್ಯೆ 5,468 ರಷ್ಟಿತ್ತು. ಈ ಬಗ್ಗೆ ಟ್ವೀಟ್ ಮಾಡಿರುವ ನಾಗರಿಕ ವಿಮಾನಯಾನ ಸಚಿವ ಜೋತಿರಾಧಿತ್ಯ ಸಿಂಧಿಯಾ ‘ಮತ್ತೊಂದು ದಿನ, ಮತ್ತೊಂದು ದಾಖಲೆ’ ಎಂದಿದ್ದಾರೆ.