₹ 20 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ: ಭಾರತದ ಮೊದಲ ಕಂಪನಿ ಹಿರಿಮೆ ರಿಲಯನ್ಸ್‌ಗೆ

| Published : Feb 15 2024, 01:30 AM IST

₹ 20 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ: ಭಾರತದ ಮೊದಲ ಕಂಪನಿ ಹಿರಿಮೆ ರಿಲಯನ್ಸ್‌ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ನ ಷೇರುಗಳ ಮಾರುಕಟ್ಟೆ ಮೌಲ್ಯ 20 ಲಕ್ಷ ಕೋಟಿ ರು. ದಾಟಿದೆ.

ಮುಂಬೈ: ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ನ ಷೇರುಗಳ ಮಾರುಕಟ್ಟೆ ಮೌಲ್ಯ 20 ಲಕ್ಷ ಕೋಟಿ ರು. ದಾಟಿದೆ. ಇದರೊಂದಿಗೆ ಇಂಥ ದಾಖಲೆ ಬರೆದ ಭಾರತದ ಮೊದಲ ಷೇರುಪೇಟೆ ನೋಂದಾಯಿತ ಕಂಪನಿ ಎಂಬ ಹಿರಿಮೆಗೆ ರಿಲಯನ್ಸ್‌ ಪಾತ್ರವಾಗಿದೆ. ಕಂಪನಿಯ ಷೇರು ಮೌಲ್ಯ ಕಳೆದ 3 ತಿಂಗಳಲ್ಲಿ ಶೇ.30ರಷ್ಟು ಏರಿಕೆ ಕಂಡ ಕಾರಣ ಈ ದಾಖಲೆ ಸಾಧ್ಯವಾಗಿದೆ. ಮುಕೇಶ್‌ ಅಂಬಾನಿ ಧೀರುಭಾಯ್‌ ಅವರಿಂದ 1977ರಲ್ಲಿ ಸ್ಥಾಪನೆಯಾದ ರಿಲಯನ್ಸ್‌ ಸದ್ಯ ತೈಲ, ಟೆಲಿಕಾಂ, ರಿಟೇಲ್‌, ಹಣಕಾಸು ಸೇವೆ ಸೇರಿದಂತೆ ನಾನಾ ವಲಯಗಳಲ್ಲಿ ಸೇವೆ ನೀಡುತ್ತಿದೆ. 2005ರಲ್ಲಿ ಕಂಪನಿ 1 ಲಕ್ಷ ಕೋಟಿ ರು. ಮೌಲ್ಯ ತಲುಪಿದ್ದು, ಅದಾದ 19 ವರ್ಷದಲ್ಲಿ 20 ಲಕ್ಷ ಕೋಟಿ ಗಡಿದಾಟಿದೆ. ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿದ ವಿಶ್ವದ ಟಾಪ್‌ 50 ಕಂಪನಿಗಳ ಪೈಕಿ ರಿಲಯನ್ಸ್‌ 43ನೇ ಸ್ಥಾನದಲ್ಲಿದೆ.