ಬೋರ್ನ್‌ವೀಟಾ ‘ಆರೋಗ್ಯ ಪೇಯ’ವಲ್ಲ: ಕೇಂದ್ರ

| Published : Apr 14 2024, 02:00 AM IST / Updated: Apr 14 2024, 06:32 AM IST

ಸಾರಾಂಶ

ಇ-ಕಾಮರ್ಸ್‌ ಕಂಪನಿಗಳು ‘ಬೋರ್ನ್‌ವೀಟಾ’ ಸೇರಿದಂತೆ ಇತರ ಶಕ್ತಿವರ್ಧಕ ಪೇಯಗಳನ್ನು ‘ಆರೋಗ್ಯ ಪೇಯ’ ಎಂದು ನಮೂದಿಸಿ ಮಾರುವಂತಿಲ್ಲ ಎಂಬುದಾಗಿ ಕೇಂದ್ರ ವಾಣಿಜ್ಯ ಸಚಿವಾಲಯ ಆದೇಶಿಸಿದೆ.

ನವದೆಹಲಿ: ಇ-ಕಾಮರ್ಸ್‌ ಕಂಪನಿಗಳು ‘ಬೋರ್ನ್‌ವೀಟಾ’ ಸೇರಿದಂತೆ ಇತರ ಶಕ್ತಿವರ್ಧಕ ಪೇಯಗಳನ್ನು ‘ಆರೋಗ್ಯ ಪೇಯ’ ಎಂದು ನಮೂದಿಸಿ ಮಾರುವಂತಿಲ್ಲ ಎಂಬುದಾಗಿ ಕೇಂದ್ರ ವಾಣಿಜ್ಯ ಸಚಿವಾಲಯ ಆದೇಶಿಸಿದೆ.

ಕೇಂದ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ‘ಆರೋಗ್ಯ ಪೇಯ’ ಎಂದು ಯಾವುದೇ ಆಹಾರಕ್ಕೆ ಉಲ್ಲೇಖ ಮಾಡಿಲ್ಲ. ಅಲ್ಲದೆ ಬೋರ್ನ್‌ವೀಟಾದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಸಕ್ಕರೆ ಅಂಶ ಕಂಡುಬಂದಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಯಾವುದೇ ಶಕ್ತಿವರ್ಧಕ ಪೇಯವನ್ನು ಆರೋಗ್ಯಕರ ಪೇಯ ಎಂಬ ಹೆಸರಿನಲ್ಲಿ ಕಂಪನಿಗಳು ಲೇಬಲ್‌ ಅಂಟಿಸಿ ಮಾರಾಟ ಮಾಡುವಂತಿಲ್ಲ ಎಂದು ಅದು ಪ್ರಕಟಿಸಿದೆ.

ಯೂಟ್ಯೂಬರ್‌ ಒಬ್ಬರು ಬೋರ್ನ್‌ವೀಟಾದಲ್ಲಿ ಹೆಚ್ಚಿನ ಅಂಶದಲ್ಲಿ ಸಕ್ಕರೆ ಪ್ರಮಾಣವಿದ್ದು, ಹಲವು ರಾಸಾಯನಿಕಗಳಿಂದ ಮಕ್ಕಳಿಗೆ ಮಾರಣಾಂತಿಕ ಕಾಯಿಲೆಯ ಜೊತೆಗೆ ಕ್ಯಾನ್ಸರ್‌ನಂತಹ ಕಾಯಿಲೆಗಳೂ ಬರಲು ಸಾಧ್ಯವಿದೆ ಎಂಬುದಾಗಿ ವಿಡಿಯೋದಲ್ಲಿ ನಿರೂಪಿಸಿದ್ದರು. ಬಳಿಕ ಅದು ವಿವಾದಕ್ಕೆ ಕಾರಣವಾಗಿ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿತ್ತು.