ಇತ್ತೀಚೆಗೆ ಸಂಸತ್ ಭವನಕ್ಕೆ ಬೀದಿನಾಯಿಯೊಂದನ್ನು ರಕ್ಷಿಸಿ ಕರೆತಂದಿದ್ದ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ, ಈ ಬಗ್ಗೆ ತಮ್ಮನ್ನು ಪ್ರಶ್ನಿಸಿದ ಪತ್ರಕರ್ತರಿಗೆ ‘ಬೌ ಬೌ’ ಎಂದು ಹೇಳಿ ಹೊರಟ ಪ್ರಸಂಗ ನಡೆಯಿತು.
ನವದೆಹಲಿ: ಇತ್ತೀಚೆಗೆ ಸಂಸತ್ ಭವನಕ್ಕೆ ಬೀದಿನಾಯಿಯೊಂದನ್ನು ರಕ್ಷಿಸಿ ಕರೆತಂದಿದ್ದ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ, ಈ ಬಗ್ಗೆ ತಮ್ಮನ್ನು ಪ್ರಶ್ನಿಸಿದ ಪತ್ರಕರ್ತರಿಗೆ ‘ಬೌ ಬೌ’ ಎಂದು ಹೇಳಿ ಹೊರಟ ಪ್ರಸಂಗ ನಡೆಯಿತು.
ಹಕ್ಕುಚ್ಯುತಿ ಮಂಡಿಸುವ ಸಾಧ್ಯತೆ
ನಾಯಿ ತಂದಿದ್ದಲ್ಲದೆ, ‘ಸದನದ ಒಳಗೆಯೂ ನಾಯಿ ಇವೆ’ ಎಂದು ರೇಣುಕಾ ಮೊನ್ನೆ ಹೇಳಿದ್ದರು. ಈ ಬಗ್ಗೆ ಇವರ ವಿರುದ್ಧ ವಿಪಕ್ಷಗಳು ಹಕ್ಕುಚ್ಯುತಿ ಮಂಡಿಸುವ ಸಾಧ್ಯತೆ ಇದೆ. ಈ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ‘ಬೌ ಬೌ’ ಎಂದು ಹೇಳಿ ಹೊರಟರು.
ನನ್ನ ವಿರುದ್ಧ ಪ್ರಸ್ತಾವನೆ ತರಲು ಬಯಸಿದರೆ, ಅವರಿಗೆ ಅವಕಾಶ ನೀಡಿ
ನಂತರ ಮತ್ತೊಮ್ಮೆ ಮಾತನಾಡಿ, ‘ಅವರು (ಬಿಜೆಪಿ ಸಂಸದರ) ನನ್ನ ವಿರುದ್ಧ ಪ್ರಸ್ತಾವನೆ ತರಲು ಬಯಸಿದರೆ, ಅವರಿಗೆ ಅವಕಾಶ ನೀಡಿ. ಅದು ನನಗೆ ಮುಖ್ಯವಲ್ಲ. ಮಾಜಿ ಪ್ರಧಾನಿ ವಾಜಪೇಯಿ ಒಮ್ಮೆ ಚಕ್ಕಡಿಯಲ್ಲಿ ಬಂದರು. ಹಿಂದು ಧರ್ಮದಲ್ಲಿ ನಾಯಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ನಾನು ಯಾವುದೇ ನಿಯಮ ಉಲ್ಲಂಘಿಸಿಲ್ಲ’ ಎಂದು ತಿರುಗೇಟು ನೀಡಿದರು/
