ಕಾಂಗ್ರೆಸ್ ಹೀನಾಯವಾಗಿ ಸೋತಿದ್ದು ಇವಿಎಂಗಳಿಂದಲ್ಲ, ಕಳಪೆ ನಾಯಕತ್ವದಿಂದ : ಬಿಜೆಪಿ ವ್ಯಂಗ್ಯ

| Published : Nov 28 2024, 12:32 AM IST / Updated: Nov 28 2024, 05:36 AM IST

ಕಾಂಗ್ರೆಸ್ ಹೀನಾಯವಾಗಿ ಸೋತಿದ್ದು ಇವಿಎಂಗಳಿಂದಲ್ಲ, ಕಳಪೆ ನಾಯಕತ್ವದಿಂದ : ಬಿಜೆಪಿ ವ್ಯಂಗ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದ್ದು ಇವಿಎಂಗಳಿಂದಲ್ಲ, ಕಾಂಗ್ರೆಸ್‌ನ ಕಳಪೆ ನಾಯಕತ್ವದಿಂದ.

ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದ್ದು ಇವಿಎಂಗಳಿಂದಲ್ಲ, ಕಾಂಗ್ರೆಸ್‌ನ ಕಳಪೆ ನಾಯಕತ್ವದಿಂದ. ಆದ್ದರಿಂದ ಮತಯಂತ್ರಗಳನ್ನು ಬದಲಿಸುವ ಬದಲು ರಾಹುಲ್‌ ಗಾಂಧಿ ನಾಯಕತ್ವವನ್ನು ಬದಲಿಸುವ ಯೋಚನೆ ಮಾಡಿ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಬಿಜೆಪಿ ಸಲಹೆ ನೀಡಿದೆ.

ಇವಿಎಂ ರದ್ದು ಮಾಡಿ ಹಿಂದಿನಂತೆ ಬ್ಯಾಲೆಟ್‌ ಪೇಪರ್‌ ಮರುಜಾರಿ ಕುರಿತ ಖರ್ಗೆ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ, ‘ಇವಿಎಂಗಳಲ್ಲಿ ಸಮಸ್ಯೆಯಿಲ್ಲ, ಸಮಸ್ಯೆ ಇರುವುದೆಲ್ಲಾ ಕಾಂಗ್ರೆಸ್‌ ನಾಯಕತ್ವದಲ್ಲಿ. ಆದ್ದರಿಂದ ಮೊದಲು ರಾಹುಲ್‌ ಗಾಂಧಿ ನಾಯಕತ್ವವನ್ನು ಬದಲಿಸಿ. ಚುನಾವಣೆಯಲ್ಲಿ ನೀವು ಸೋಲಲು ರಾಹುಲ್‌ ಬೇಕಾರ್‌ (ಕಳಪೆ) ನಾಯಕತ್ವವೇ ಪ್ರಮುಖ ಕಾರಣ’ ಎಂದು ವ್ಯಂಗ್ಯವಾಡಿದ್ದಾರೆ.

ಜೊತೆಗೆ, ‘ನಿಮಗೆ ಮತ್ತು ರಾಹುಲ್‌ ಗಾಂಧಿ ಅವರಿಗೆ ಮೋದಿ ಸರ್ಕಾರ, ಮತಯಂತ್ರ, ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ ಹಾಗೂ ಕೇಂದ್ರೀಯ ತನಿಖಾ ದಳ (ಸಿಬಿಐ) ಬೇಡವೆಂದರೆ ನೀವು ದಯವಿಟ್ಟು ರಾಹುಲ್‌ ಗಾಂಧಿ ಅವರನ್ನು ಕರೆದುಕೊಂಡು ಮಂಗಳ ಗ್ರಹಕ್ಕೆ ಹೋಗಿಬಿಡಿ. ಅಲ್ಲಿ ಸಂತೋಷದಿಂದ ಜೀವನ ನಡೆಸಿ’ ಎಂದು ಖರ್ಗೆಗೆ ವ್ಯಂಗ್ಯವಾಗಿ ಟಾಂಗ್‌ ಕೊಟ್ಟಿದ್ದಾರೆ.