ಇಲ್ಲಿಯ ನೀಮ್‌ ಕಾ ಥಾಣ ಜಿಲ್ಲೆಯ ಗಣಿಯೊಂದರಲ್ಲಿ ಕಾಮಗಾರಿ ಪರಿಶೀಲನೆಗೆಂದು ಹೋಗಿದ್ದ ಹಿಂದೂಸ್ತಾನ್‌ ಕಾಪರ್ ಲಿಮಿಟೆಡ್‌ನ ವಿಚಕ್ಷಣಾ ತಂಡದ 15 ಅಧಿಕಾರಿಗಳು ಲಿಫ್ಟ್‌ನ ಹಗ್ಗ ತುಂಡಾದ ಕಾರಣ ಅಲ್ಲೇ ಸಿಕ್ಕಿಹಾಕಿಕೊಂಡಿದ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಜೈಪುರ: ಇಲ್ಲಿಯ ನೀಮ್‌ ಕಾ ಥಾಣ ಜಿಲ್ಲೆಯ ಗಣಿಯೊಂದರಲ್ಲಿ ಕಾಮಗಾರಿ ಪರಿಶೀಲನೆಗೆಂದು ಹೋಗಿದ್ದ ಹಿಂದೂಸ್ತಾನ್‌ ಕಾಪರ್ ಲಿಮಿಟೆಡ್‌ನ ವಿಚಕ್ಷಣಾ ತಂಡದ 15 ಅಧಿಕಾರಿಗಳು ಲಿಫ್ಟ್‌ನ ಹಗ್ಗ ತುಂಡಾದ ಕಾರಣ ಅಲ್ಲೇ ಸಿಕ್ಕಿಹಾಕಿಕೊಂಡಿದ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಆದರೆ ಬಳಿಕ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಎಲ್ಲಾ 15 ಅಧಿಕಾರಿಗಳನ್ನೂ ರಕ್ಷಿಸಿ ಮೇಲಕ್ಕೆ ಕರೆತರಲಾಗಿದೆ. ಆದರೆ ಮೇಲೆ ಬಂದ ಬಳಿಕ ಮುಖ್ಯ ವಿಚಕ್ಷಣಾಧಿಕಾರಿ ಸಾವನ್ನಪ್ಪಿದ್ದಾರೆ. ಕುಮಾರ್‌ ಪಾಂಡ್ಯ ಮೃತ ಪಟ್ಟ ಅಧಿಕಾರಿ.

ಮಂಗಳವಾರ ತಡರಾತ್ರಿ ಗಣಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಸಿಬ್ಬಂದಿಯನ್ನು ಮೇಲೆ ಕರೆ ತರುವ ಲಿಫ್ಟಿನ ಹಗ್ಗವು ತುಂಡಾ ಬಿದ್ದಿದೆ. ಇದರಿಂದ 15 ಮಂದಿ ಸಿಬ್ಬಂದಿ 1875 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದರು. ಈ ಸುದ್ದಿ ತಿಳಿದು ರಕ್ಷಣಾ ತಂಡಗಳು ಗಣಿ ನಡೆಸುತ್ತಿರುವ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡು 15 ಅಧಿಕಾರಿಗಳನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತಂದರು. ಆದರೆ ಅದರಲ್ಲಿ ಮುಖ್ಯ ವಿಚಕ್ಷಣಾಧಿಕಾರಿ ಕುಮಾರ್‌ ಪಾಂಡ್ಯ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.ಉಳಿದ 14 ಮಂದಿ ಅಧಿಕಾರಿಗಳನ್ನು ಚಿಕಿತ್ಸೆಗಾಗಿ ಜೈಪುರದ ಎಸ್‌ಎಂಎಸ್‌ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಚಕ್ಷಣಾ ತಂಡವು ಗಣಿಗಾರಿಕೆ ಪರಿಶೀಲನೆಗೆಂದು ಕೋಲ್ಕತಾದಿಂದ ಆಗಮಿಸಿದ್ದರು.