‘ನನ್ನ ಮಗನಿಗೆ ಬ್ರಾಹ್ಮಣ ಹುಡುಗಿಯೊಂದಿಗೆ ಸಂಬಂಧ ಕೂಡುವ ವರೆಗೆ ಮೀಸಲಾತಿ ವ್ಯವಸ್ಥೆ ಮುಂದುವರೆಯಬೇಕು’ ಎಂದು ಮಧ್ಯಪ್ರದೇಶದ ಹಿರಿಯ ಐಎಎಸ್‌ ಅಧಿಕಾರಿ ಸಂತೋಷ್‌ ವರ್ಮಾ ಹೇಳಿದ್ದಾರೆ. ಈ ಮೂಲಕ, ತಮ್ಮ ವಿವಾದಗಳ ಸಾಲಿಗೆ ಇನ್ನೊಂದನ್ನು ಸೇರಿಸಿಕೊಂಡು, ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಧ್ಯಪ್ರದೇಶ ಅಧಿಕಾರಿ ಹೇಳಿಕೆಗೆ ಆಕ್ರೋಶಭೋಪಾಲ್‌: ‘ನನ್ನ ಮಗನಿಗೆ ಬ್ರಾಹ್ಮಣ ಹುಡುಗಿಯೊಂದಿಗೆ ಸಂಬಂಧ ಕೂಡುವ ವರೆಗೆ ಮೀಸಲಾತಿ ವ್ಯವಸ್ಥೆ ಮುಂದುವರೆಯಬೇಕು’ ಎಂದು ಮಧ್ಯಪ್ರದೇಶದ ಹಿರಿಯ ಐಎಎಸ್‌ ಅಧಿಕಾರಿ ಸಂತೋಷ್‌ ವರ್ಮಾ ಹೇಳಿದ್ದಾರೆ. ಈ ಮೂಲಕ, ತಮ್ಮ ವಿವಾದಗಳ ಸಾಲಿಗೆ ಇನ್ನೊಂದನ್ನು ಸೇರಿಸಿಕೊಂಡು, ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪರಿಶಿಷ್ಟ ಜಾತಿ, ಪಂಗಡದ ಸಂಘವೊಂದರ ಪ್ರಾಂತೀಯ ಅಧ್ಯಕ್ಷರಾಗಿರುವ ವರ್ಮಾ ಅದರ ಕಾರ್ಯಕ್ರಮವೊಂದರಲ್ಲಿ ಇಂತಹ ಹೇಳಿಕೆ ನೀಡಿದ್ದು, ಬ್ರಾಹ್ಮಣ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ‘ವರ್ಮಾರ ಹೇಳಿಕೆ ಅಸಭ್ಯ, ಜಾತಿವಾದಿ ಮತ್ತು ಬ್ರಾಹ್ಮಣ ಹೆಣ್ಣುಮಕ್ಕಳಿಗೆ ಅವಮಾನಕರವಾಗಿದೆ. ಇವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಬೇಕು. ಇಲ್ಲದಿದ್ದರೆ ಬ್ರಾಹ್ಮಣ ಸಮಾಜದ ವತಿಯಿಂದ ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ’ ಎಂದು ಎಚ್ಚರಿಸಿದ್ದಾರೆ.

2017ರಲ್ಲಿ ವರ್ಮಾ ಮೇಲೆ ಮಹಿಳೆಯೊಬ್ಬಳಿಗೆ ಅವಮಾನವಾಗುವ ರೀತಿಯ ವಿಯಷಗಳನ್ನು ಹರಿಬಿಟ್ಟಿದ್ದಕ್ಕಾಗಿ ಪ್ರಕರಣ ದಾಖಲಾಗಿತ್ತು. 2021ರಲ್ಲಿ ಬಡ್ತಿ ಪಡೆಯಲು ನ್ಯಾಯಾಲಯದ ಆದೇಶಗಳನ್ನು ನಕಲಿ ಮಾಡಿದ ಆರೋಪವೂ ಇವರ ಮೇಲಿದೆ.