ಬೆಂಗಳೂರು ಪೊಲೀಸರ ಹೆಸರಲ್ಲಿ ಡಿಜಿಟಲ್‌ ಸೆರೆ: ನಿವೃತ್ತ ವೈದ್ಯೆ ಸಾವು

| Published : Sep 18 2025, 01:10 AM IST

ಬೆಂಗಳೂರು ಪೊಲೀಸರ ಹೆಸರಲ್ಲಿ ಡಿಜಿಟಲ್‌ ಸೆರೆ: ನಿವೃತ್ತ ವೈದ್ಯೆ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ಪೊಲೀಸರು ಹೆಸರಿನಲ್ಲಿ ಡಿಜಿಟಲ್‌ ವಂಚಕರು ಸ್ಥಳೀಯ ನಿವೃತ್ತ ಸರ್ಕಾರಿ ವೈದ್ಯೆಯನ್ನು ಮೂರು ದಿನಗಳ ಕಾಲ ಡಿಜಿಟಲ್‌ ಅರೆಸ್ಟ್‌ಗೆ ಒಳಪಡಿಸಿದ ಕಾರಣ ಅವರು ಒತ್ತಡ ತಾಳಲಾಗದೇ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪದ ಆಘಾತಕಾರಿ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಮಾನವ ಕಳ್ಳಸಾಗಣೆ ಆರೋಪ ಹೊರಿಸಿ 3 ದಿನ ಡಿಜಿಟಲ್‌ ಅರೆಸ್ಟ್‌

ವೈದ್ಯೆ ಪಿಂಚಣಿ ಖಾತೆಯಲ್ಲಿದ್ದ ₹6.5 ಲಕ್ಷ ಹಣ ವರ್ಗಾಯಿಸಿ ವಂಚನೆ

3 ದಿನದ ಒತ್ತಡ ತಾಳಲಾಗದೇ ಹೃದಯಾಘಾತಕ್ಕೆ ಒಳಗಾಗಿ ಸಾವು

==

ಹೈದರಾಬಾದ್‌: ಬೆಂಗಳೂರು ಪೊಲೀಸರು ಹೆಸರಿನಲ್ಲಿ ಡಿಜಿಟಲ್‌ ವಂಚಕರು ಸ್ಥಳೀಯ ನಿವೃತ್ತ ಸರ್ಕಾರಿ ವೈದ್ಯೆಯನ್ನು ಮೂರು ದಿನಗಳ ಕಾಲ ಡಿಜಿಟಲ್‌ ಅರೆಸ್ಟ್‌ಗೆ ಒಳಪಡಿಸಿದ ಕಾರಣ ಅವರು ಒತ್ತಡ ತಾಳಲಾಗದೇ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪದ ಆಘಾತಕಾರಿ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಏನಾಯ್ತು?:

ಸೆ.5ರಂದು ವಂಚಕರು ನಿವೃತ್ತ ವೈದ್ಯೆಗೆ ಬೆಂಗಳೂರು ಪೊಲೀಸರ ಹೆಸರಲ್ಲಿ ಕರೆ ಮಾಡಿದ್ದ ವಂಚಕರು, ನೀವು ಅಕ್ರಮ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ. ನಿಮ್ಮ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕೇಸು ದಾಖಲಾಗಿದ್ದಾರೆ ಎಂದು ಆರೋಪಿಸಿದ್ದರು. ಮೊದಲಿಗೆ ವೈದ್ಯೆ ಈ ಕುರಿತು ಒಪ್ಪದೇ ಹೋದರೂ ಆಕೆಗೆ ಪದೇ ಪದೇ ಮೂರು ದಿನಗಳ ಕಾಲ ಇನ್‌ಸ್ಟಂಟ್‌ ಮೆಸೇಜಿಂಗ್‌ ಆ್ಯಪ್‌ ಮತ್ತು ವಿಡಿಯೋ ಕರೆ ಮಾಡಿ ಬೆದರಿಕೆ ಹಾಕಿದೆ.

ಜೊತೆಗೆ ವಂಚಕರ ತಂಡ ಕರ್ನಾಟಕ ಪೊಲೀಸ್‌, ಜಾರಿ ನಿರ್ದೇಶನಾಲಯ, ಭಾರತೀಯ ರಿಸರ್ವ ಬ್ಯಾಂಕ್‌ ಮತ್ತು ನ್ಯಾಯಾಲಯದ ಹೆಸರಿನಲ್ಲಿ ಸೃಷ್ಟಿಸಿದ ನಕಲಿ ದಾಖಲೆಗಳನ್ನು ತೋರಿಸಿ ವೈದ್ಯೆಯನ್ನು ಹೆದರಿಸಿದ್ದಾರೆ. ಇದರಿಂದ ಬೆದರಿದ ವೈದ್ಯೆ, ಮನೆಯಲ್ಲಿ ಯಾರಿಗೂ ತಿಳಿಸದೇ ತನ್ನ ಪಿಂಚಣಿ ಖಾತೆಯಲ್ಲಿದ್ದ 6.5 ಲಕ್ಷ ರು. ಹಣವನ್ನು ವಂಚಕರ ಬ್ಯಾಂಕ್‌ ಖಾತೆಗೆ ವರ್ಗ ಮಾಡಿದ್ದಾರೆ. ಜೊತೆಗೆ ಹಣ ವರ್ಗ ಮಾಡಿದ ಸ್ಲಿಪ್‌ ಅನ್ನು ಕೂಡಾ ಅಪ್‌ಲೋಡ್‌ ಮಾಡಿಸಿದ್ದಾರೆ.

ಸತತ ಮೂರು ದಿನ ಡಿಜಿಟಲ್‌ ಅರೆಸ್ಟ್‌ ನಡೆದರೂ ವೈದ್ಯೆ ಮನೆಯಲ್ಲಿ ಈ ವಿಷಯ ತಿಳಿಸಿಲ್ಲ. ಅಂತಿಮವಾಗಿ ಸೆ.8ರಂದು ಬೆಳಗ್ಗೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಕಾರಣ ಅವರ ಪುತ್ರ ತಾಯಿಯನ್ನು ಆಸ್ಪತ್ರೆಗೆ ದಾಖಲು ಮಾಡಿದರಾದರೂ ಚಿಕಿತ್ಸೆ ಫಲಿಸದೇ ಆವರು ಸಾವನ್ನಪ್ಪಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ತಮ್ಮ ತಾಯಿಯ ಮೊಬೈಲ್‌ ಕರೆಗಳನ್ನು ಅವರ ಪುತ್ರ ಪರಿಶೀಲಿಸಿದ ವೇಳೆ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ವೈದ್ಯೆಯ ದೂರವಾಣಿ ಕರೆಗಳನ್ನು ಪರಿಶೀಲಿಸಿ ಪುತ್ರ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.

ಈ ನಡುವೆ ಮಹಿಳೆ ಸಾವಿನ ಸುದ್ದಿ ತಿಳಿಯದ ವಂಚಕರು, ಆಕೆಯ ಮೊಬೈಲ್‌ಗೆ ಸಾವಿನ ಬಳಿಕವೂ ಕರೆ ಮಾಡಿದ್ದ ವಿಷಯವೂ ಪತ್ತೆಯಾಗಿದೆ.