ಪಶ್ಚಿಮ ಬಂಗಾಳದ ಟ್ರೈನಿ ವೈದ್ಯೆ ಮೇಲೆ ರಾಯ್‌ನಿಂದಲೇ ರೇಪ್‌ : ಸಿಬಿಐ ಆರೋಪ ಪಟ್ಟಿ

| Published : Oct 08 2024, 01:18 AM IST / Updated: Oct 08 2024, 04:17 AM IST

ಸಾರಾಂಶ

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ಪ್ರಮುಖ ಆರೋಪಿ ಸಂಜಯ್‌ ರಾಯ್‌ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ.

ನವದೆಹಲಿ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ಪ್ರಮುಖ ಆರೋಪಿ ಸಂಜಯ್‌ ರಾಯ್‌ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ.

ಕೋಲ್ಕತಾದ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಚಾರ್ಜ್‌ಶೀಟ್‌ನಲ್ಲಿ, ಆ.9ರಂದು ವಿರಾಮದ ವೇಳೆ ಟ್ರೈನಿ ವೈದ್ಯೆ ಸೆಮಿನಾರ್‌ ಹಾಲಿನಲ್ಲಿ ಮಲಗಲು ಹೋಗಿದ್ದಾಗ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದ ರಾಯ್‌ ಈ ಕೃತ್ಯ ಎಸಗಿರುವುದಾಗಿ ತಿಳಿಸಲಾಗಿದೆ. ಇದರಲ್ಲಿ ಸಾಮೂಹಿಕ ಅತ್ಯಾಚಾರದ ಬಗ್ಗೆ ಉಲ್ಲೇಖವಿಲ್ಲ.

ಕಲ್ಕತ್ತಾ ಕೋರ್ಟ್‌ನ ಆದೇಶದಂತೆ ಆ.14ರಂದು ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಸಿಬಿಐ, ರಾಯ್‌ನನ್ನು ವಶಕ್ಕೆ ಪಡೆದು ಸುಳ್ಳುಪತ್ತೆ ಪರೀಕ್ಷೆ ಸೇರಿದಂತೆ ವಿವರವಾದ ತನಿಖೆ ನಡೆಸಿತ್ತು.

ಅಂತೆಯೇ ತಾಲಾ ಪೊಲೀಸ್‌ ಠಾಣೆಯ ಉಸ್ತುವಾರಿ ಅಭಿಜಿತ್‌ ಮೊಂಡಲ್‌ ಹಾಗೂ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ರನ್ನು ಸಿಬಿಐ ಬಂಧಿಸಿತ್ತು. ಘೋಷ್‌ ವಿರುದ್ಧ ಭ್ರಷ್ಟಾಚಾರದ ತನಿಖೆಯೂ ನಡೆಯುತ್ತಿದೆ.