ನಾಳೆಯಿಂದ ಅಮೆರಿಕದಲ್ಲಿ ವಿಶ್ವದ ಅತ್ಯಂತ ಜನಪ್ರಿಯ ಆ್ಯಪ್‌ ಟಿಕ್‌ ಟಾಕ್‌ ನಿಷೇಧ ?

| Published : Jan 19 2025, 02:20 AM IST / Updated: Jan 19 2025, 04:36 AM IST

Tik Tok

ಸಾರಾಂಶ

ವಿಶ್ವದ ಅತ್ಯಂತ ಜನಪ್ರಿಯ ಆ್ಯಪ್‌ ಆದ ಟಿಕ್‌ಟಾಕ್‌ ಜ.20ರಿಂದ ಅಮೆರಿಕದಲ್ಲಿ ತನ್ನ ಸೇನೆ ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಅಮೆರಿಕದಲ್ಲಿ ತನ್ನ ಕಾರ್ಯಾಚರಣೆ ಮುಂದುವರೆಸಲು ಚೀನಾ ಮೂಲದ ಬೈಟ್‌ಡ್ಯಾನ್ಸ್‌ ಒಡೆತನದ ಕಂಪನಿ ತನ್ನೆಲ್ಲೇ ಪ್ರಯತ್ನಗಳನ್ನು ಮುಂದುವರೆಸಿದೆ.

ವಾಷಿಂಗ್ಟನ್‌: ವಿಶ್ವದ ಅತ್ಯಂತ ಜನಪ್ರಿಯ ಆ್ಯಪ್‌ ಆದ ಟಿಕ್‌ಟಾಕ್‌ ಜ.20ರಿಂದ ಅಮೆರಿಕದಲ್ಲಿ ತನ್ನ ಸೇನೆ ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಅಮೆರಿಕದಲ್ಲಿ ತನ್ನ ಕಾರ್ಯಾಚರಣೆ ಮುಂದುವರೆಸಲು ಚೀನಾ ಮೂಲದ ಬೈಟ್‌ಡ್ಯಾನ್ಸ್‌ ಒಡೆತನದ ಕಂಪನಿ ತನ್ನೆಲ್ಲೇ ಪ್ರಯತ್ನಗಳನ್ನು ಮುಂದುವರೆಸಿದೆ.

ಒಂದು ವೇಳೆ ಹಾಲಿ ಬೈಡೆನ್‌ ಆಡಳಿತ ಅಥವಾ ಜ.20ರಿಂದ ಅಧಿಕಾರಕ್ಕೆ ಬರುವ ಟ್ರಂಪ್‌ ಆಡಳಿತ ನಿಷೇಧ ಹಿಂಪಡೆಯಲು ಮುಂದಾಗದೇ ಇದ್ದರೆ ಅಮೆರಿಕದ 17 ಕೋಟಿ ಟಿಕ್‌ಟ್ಯಾಕ್‌ ಬಳಕೆದಾರರು ಶೀಘ್ರವೇ ಆ್ಯಪ್‌ನಿಂದ ದೂರವಾಗುವುದು ಅನಿವಾರ್ಯ

ಏನಿದು ಪ್ರಕರಣ?:

ಟಿಕ್‌ಟಾಕ್‌ನ ಮಾತೃ ಸಂಸ್ಥೆ ಚೀನಾದ್ದು. ಈ ಆ್ಯಪ್‌ಗೆ ಅಮೆರಿಕದಲ್ಲಿ 17 ಕೋಟಿ ಬಳಕೆದಾರರು ಇದ್ದಾರೆ. ಇದನ್ನು ಬಳಸಿಕೊಂಡು ಚೀನಾ ಸರ್ಕಾರ ಅಮೆರಿಕ ಅಥವಾ ಅಮೆರಿಕನ್ನರ ಮೇಲೆ ಗೂಢಚರ್ಯೆ ನಡೆಸಬಹುದು. ಅಥವಾ ಕೆಲವು ವಿಷಯಗಳನ್ನು ವೈಭವೀಕರಿಸಿ ಇಲ್ಲವೇ ಮುಚ್ಚಿಹಾಕುವ ಮೂಲಕ ಅಮೆರಿಕನ್ನರ ಮೇಲೆ ಪ್ರಭಾವ ಬೀರಬಹುದು. ಇದು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಸಂಗತಿ ಎನ್ನುವ ಕಾರಣಕ್ಕೆ ಅಮೆರಿಕ ಸಂಸತ್‌ 2023ರಲ್ಲಿ ಟಿಕ್‌ಟಾಕ್‌ ಮೇಲೆ ನಿಷೇಧ ಹೇರಿತ್ತು. ಆದರೆ ನಿಷೇಧ ಜಾರಿಗೆ 2025ರ ಜ.19ರ ಗಡುವು ನೀಡಿತ್ತು. ಒಂದು ವೇಳೆ ಅಷ್ಟರೊಳಗೆ ಟಿಕ್‌ಟಾಕ್ ಅನ್ನು ಯಾವುದಾದರೂ ಅಮೆರಿಕದ ಕಂಪನಿಗೆ ಮಾರಾಟ ಮಾಡಿದರೆ ಅದು ಸೇವೆ ಮುಂದುವರೆಸಬಹುದು ಎಂದು ಹೇಳಿತ್ತು.

ಸುಪ್ರೀಂ ಅನುಮತಿ?

ಸರ್ಕಾರದ ಆದೇಶವನ್ನು ಟಿಕ್‌ಟಾಕ್‌ ಅಮೆರಿಕದ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ಕುರಿತು ಶುಕ್ರವಾರ ತೀರ್ಪು ನೀಡಿದ ಕೋರ್ಟ್‌, ನಿಷೇಧ ಯಾವುದೇ ನಿಯಮ ಉಲ್ಲಂಘನೆ ಮಾಡಲ್ಲ ಎಂದು ಹೇಳಿತ್ತು.

ಮುಂದಿನ ಹಾದಿ?:

ಈ ನಡುವೆ ನಿಷೇಧ ಜಾರಿಯನ್ನು ನೂತನ ಅಧ್ಯಕ್ಷ ಟ್ರಂಪ್‌ ಸರ್ಕಾರಕ್ಕೆ ಬಿಡಲಾಗುವುದು ಎಂದು ಬೈಡನ್‌ ಸರ್ಕಾರ ತಿಳಿಸಿದೆ. ಅದಕ್ಕೂ ಮೊದಲು ಟಿಕ್‌ಟಾಕ್‌ ಅನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಪ್ರಗತಿಯಾದರೆ ಅದರ ಮೇಲಿನ ನಿರ್ಬಂಧವನ್ನು 90 ದಿನಗಳ ಮಟ್ಟಿಗೆ ತಡೆಹಿಡಿಯಲಾಗುವುದು.

ಬ್ಯಾನ್‌ನಿಂದ ಏನಾಗುವುದು?:ನಿರ್ಬಂಧ ಜಾರಿಯಾದಂದಿನಿಂದ ಟಿಕ್‌ಟಾಕ್‌ ಆ್ಯಪನ್ನು ಇನ್ಸ್ಟಾಲ್‌ ಮಾಡುವುದು ಸಾಧ್ಯವಾಗುವುದಿಲ್ಲ. ಪ್ರಸ್ತುತ ಬಳಸುತ್ತಿರುವವರಿಗೆ ಇದು ಲಭ್ಯವಿರಲಿದೆ. ಆದರೆ ಬಳಿಕ ಅಪ್‌ಡೇಟ್‌ಗಳು ಲಭಿಸುವುದಿಲ್ಲ. ಇದರಿಂದ ಸುರಕ್ಷತೆ ಸಂಬಂಧಿತ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಯಿದೆ.