ಬ್ರಿಟನ್‌ನ ಯುವಕರು ಮತ್ತು ಮಕ್ಕಳಲ್ಲಿ ಗಣಿತದಲ್ಲಿ ಕಲಿಕಾಸಕ್ತಿ ಬೆಳೆಸಲು ಇನ್ಫಿಮೂರ್ತಿ ಪುತ್ರಿ ಚಾರಿಟಿ ಆರಂಭ

| N/A | Published : Mar 02 2025, 01:18 AM IST / Updated: Mar 02 2025, 06:09 AM IST

ಬ್ರಿಟನ್‌ನ ಯುವಕರು ಮತ್ತು ಮಕ್ಕಳಲ್ಲಿ ಗಣಿತದಲ್ಲಿ ಕಲಿಕಾಸಕ್ತಿ ಬೆಳೆಸಲು ಇನ್ಫಿಮೂರ್ತಿ ಪುತ್ರಿ ಚಾರಿಟಿ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಿಟನ್‌ನ ಯುವಕರು ಮತ್ತು ಮಕ್ಕಳಲ್ಲಿ ಗಣಿತ ಮತ್ತು ಸಂಖ್ಯಾಶಾಸ್ತ್ರದ ಕೌಶಲ್ಯಗಳನ್ನು ಸುಧಾರಿಸಲು ಹೊಸ ಚಾರಿಟಿ ಆರಂಭಿಸುವುದಾಗಿ ನಾರಾಯಣಮೂರ್ತಿ ಅವರ ಅಳಿಯ, ಬ್ರಿಟನ್‌ನ ಮಾಜಿ ಪ್ರಧಾನಿ ರಿಶಿ ಸುನಕ್‌ ಹಾಗೂ ಪತ್ನಿ ಅಕ್ಷತಾ ಮೂರ್ತಿ ಘೋಷಿಸಿದ್ದಾರೆ.

ಲಂಡನ್‌: ಬ್ರಿಟನ್‌ನ ಯುವಕರು ಮತ್ತು ಮಕ್ಕಳಲ್ಲಿ ಗಣಿತ ಮತ್ತು ಸಂಖ್ಯಾಶಾಸ್ತ್ರದ ಕೌಶಲ್ಯಗಳನ್ನು ಸುಧಾರಿಸಲು ಹೊಸ ಚಾರಿಟಿ ಆರಂಭಿಸುವುದಾಗಿ ನಾರಾಯಣಮೂರ್ತಿ ಅವರ ಅಳಿಯ, ಬ್ರಿಟನ್‌ನ ಮಾಜಿ ಪ್ರಧಾನಿ ರಿಶಿ ಸುನಕ್‌ ಹಾಗೂ ಪತ್ನಿ ಅಕ್ಷತಾ ಮೂರ್ತಿ ಘೋಷಿಸಿದ್ದಾರೆ.

ಈ ಚಾರಿಟಿಗೆ ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಹೆಸರಾದ '''ದಿ ರಿಚ್‌ಮಂಡ್‌ ಪ್ರಾಜೆಕ್ಟ್‌'' ಎಂದು ನಾಮಕರಣ ಮಾಡಿದ್ದಾರೆ. ಇದು ಸುನಕ್‌ ದಂಪತಿಯ ಮೊದಲ ಪ್ರಮುಖ ಜಂಟಿ ಯೋಜನೆಯಾಗಿದೆ.

ಗಣಿತದಲ್ಲಿನ ಆತ್ಮವಿಶ್ವಾಸವು ಜೀವನವನ್ನೇ ಬದಲಿಸುತ್ತದೆ. ಇದು ಅವಕಾಶಗಳ ಬಾಗಿಲು ತೆರೆಯುತ್ತದೆ, ಸಾಮಾಜಿಕ ಚಲನಶೀಲತೆಗೆ ಉತ್ತೇಜನ ನೀಡುತ್ತದೆ ಮತ್ತು ಜನರ ಬೆಳವಣಿಗೆಗೆ ನೆರವು ನೀಡುತ್ತದೆ. ಆದರೆ ಸದ್ಯ ಗಣಿತದಲ್ಲಿ ಹೆಚ್ಚಿನವರು ಪರದಾಡುತ್ತಿದ್ದಾರೆ ಎಂದು ಸುನಕ್‌ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಈ ಹೊಸ ಚಾರಿಟಿಯು ನಮ್ಮಿಬ್ಬರಿಗೂ ಶಿಕ್ಷಣ ಶಕ್ತಿಯ ಕುರಿತು ಇರುವ ಆಸಕ್ತಿಯ ಭಾಗವಾಗಿದೆ ಎಂದು ಹೇಳಿಕೊಂಡಿರುವ ನಾರಾಯಣಮೂರ್ತಿ ಅವರ ಪುತ್ರಿಯೂ ಆಗಿರುವ ಅಕ್ಷತಾ, ಗಣಿತವೆಂದರೆ ಆತಂಕ ನಿಜ. ನಾವು ಆರಂಭಿಸುತ್ತಿರುವ ದಿ ರಿಚ್‌ಮಂಡ್‌ ಪ್ರಾಜೆಕ್ಟ್‌, ಜನರಲ್ಲಿ ಗಣಿತದ ಕುರಿತ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶ ಹೊಂದಿದೆ. ಯಾಕೆಂದರೆ ಸಂಖ್ಯಾಶಾಸ್ತ್ರವು ಅವಕಾಶಗಳ ಬಾಗಿಲು ತೆರೆಯುತ್ತದೆ ಎಂದು ನಾವು ನಂಬಿದ್ದೇವೆ ಎಂದಿದ್ದಾರೆ.

ಸದ್ಯ ಬ್ರಿಟನ್‌ನ ಉದ್ಯೋಗದ ವಯಸ್ಸಿನ ಅರ್ಧದಷ್ಟು ಯುವಕರು ಸಂಖ್ಯಾಶಾಸ್ತ್ರದ ಕೌಶಲ್ಯದಲ್ಲಿ ಹಿಂದುಳಿದಿದ್ದಾರೆ. ಇದು ಕೆಲಸ ಪಡೆಯಲು, ಗೃಹಬಳಕೆಯ ಬಿಲ್‌ಗಳ ನಿರ್ವಹಣೆ ಸೇರಿ ನಿತ್ಯ ನೀವನದ ಮೇಲೆ ಪರಿಣಾಮ ಬೀರುತ್ತದೆ. ನಾವು ಶಿಕ್ಷಣದ ಶಕ್ತಿ ಏನೆಂಬುದನ್ನು ಸ್ವತಃ ಅನುಭವಿಸಿದ್ದೇವೆ. ಹೀಗಾಗಿ ಇದೀಗ ಮಕ್ಕಳು ಮತ್ತು ಯುವಕರಲ್ಲಿ ಗಣಿತಕ್ಕೆ ಸಂಬಂಧಿಸಿ ಆತ್ಮವಿಶ್ವಾಸ ತುಂಬಲು ಮತ್ತು ಸಂತೋಷದ ಜೀವನ ನಡೆಸಲು ನೆರವಾಗಲು ಬಯಸುತ್ತಿರುವುದಾಗಿ ತಿಳಿಸಿದ್ದಾರೆ.