ಸಾರಾಂಶ
ಮಲಯಾಳ ಮನೋರಮಾ ಗ್ರೂಪ್‌ನ ರಿಯಾದ್ ಮ್ಯಾಥ್ಯೂ ಅವರು 2024-25ನೇ ಸಾಲಿಗೆ ಆಡಿಟ್ ಬ್ಯರೋ ಆಫ್ ಸರ್ಕ್ಯೂಲೇಷನ್‌ನ (ಎಬಿಸಿ) ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಮುಂಬೈ: ಮಲಯಾಳ ಮನೋರಮಾ ಗ್ರೂಪ್‌ನ ನಿರ್ದೇಶಕ ಹಾಗೂ ಮುಖ್ಯ ಸಹ ಸಂಪಾದಕ ರಿಯಾದ್ ಮ್ಯಾಥ್ಯೂ ಅವರು ಆಡಿಟ್ ಬ್ಯರೋ ಆಫ್ ಸರ್ಕ್ಯೂಲೇಷನ್‌ನ (ಎಬಿಸಿ) ಅಧ್ಯಕ್ಷರಾಗಿ 2024-25ನೇ ಸಾಲಿಗೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಐಟಿಸಿ ಲಿಮಿಡೆಟ್‌ನ ಕರುಣೇಶ್ ಬಜಾಜ್ ಅವರನ್ನು ಉಪಾಧ್ಯಕ್ಷರನ್ನಾಗಿ, ಬೆನೆಟ್ ಕೋಲ್ಮನ್ ಆ್ಯಂಟ್ ಕೋ. ಲಿಮಿಟೆಡ್‌ನ ಮೋಹಿತ್ ಜೈನ್ ಅವರನ್ನು ಗೌರವ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಮ್ಯಾಡಿಸನ್ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್‌ನ ವಿಕ್ರಮ್ ಸಖೂಜ ಅವರನ್ನು ಗೌರವ ಖಜಾಂಚಿಯನ್ನಾಗಿ ಆಯ್ಕೆಮಾಡಲಾಗಿದೆ.
ಪ್ರಕಾಶಕರ ಪ್ರತಿನಿಧಿಗಳು:
ಮಲಯಾಳ ಮನೋರಮಾ ಸಮೂಹದ ರಿಯಾದ್ ಮ್ಯಥ್ಯೂ, ಸಕಲ ಪೇಪರ್ ಪ್ರೈವೇಟ್ ಲಿಮಿಟೆಡ್‌ನ ಪ್ರತಾಪ್ ಜಿ. ಪವಾರ್, ಜಗ್ರನ್ ಪ್ರಕಾಶನ ಲಿಮಿಟೆಡ್‌ನ ಶೈಲೇಶ್ ಗುಪ್ತಾ, ಎಚ್‌ಟಿ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಪ್ರವೀಣ್ ಸೋಮೇಶ್ವರ್, ಬೆನೆಟ್ ಕೋಲ್ಮನ್ ಆ್ಯಂಡ್ ಕೋ. ಲಿಮಿಟೆಡ್‌ನ ಮೋಹಿತ್ ಜೈನ್, ಎಬಿಪಿ ಪ್ರೈವೇಟ್ ಲಿಮಿಟೆಡ್‌ನ ಧ್ರುವ ಮುಖರ್ಜಿ, ಲೋಕಮಾತ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಕರಣ್ ದರ್ಬಾ ಹಾಗೂ ಡಿ.ಬಿ. ಕಾರ್ಪ್ ಲಿಮಿಟೆಡ್‌ನ ಗಿರೀಶ್ ಅಗರ್ವಾಲ್.
ಜಾಹೀರಾತು ಪ್ರತಿನಿಧಿಗಳು:
ಐಟಿಸಿ ಲಿಮಿಡೆಟ್‌ನ ಕರುಣೇಶ್ ಬಜಾಜ್, ಟಿವಿಎಸ್ ಮೋಟರ್ ಕಂಪನಿ ಪ್ರೈವೇಟ್ ಲಿಮಿಟೆಡ್‌ನ ಅನಿರುದ್ಧ್ ಹಾಲ್ದಾರ್ ಹಾಗೂ ಮಾರುತಿ ಸುಜುಕಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಪಾರ್ಥೋ ಬ್ಯಾನರ್ಜಿ.
ಜಾಹೀರಾತು ಏಜೆನ್ಸಿಯ ಪ್ರತಿನಿಧಿಗಳು:
ಆರ್.ಕೆ. ಸ್ವಾಮಿ ಲಿಮಿಟೆಡ್‌ನ ಶ್ರೀನಿವಾಸನ್ ಕೆ. ಸ್ವಾಮಿ, ಮ್ಯಾಡಿಸನ್ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್‌ನ ವಿಕ್ರಮ್ ಸಖೂಜ, ಗ್ರೂಪ್ ಎಂ ಮೀಡಿಯಾ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಪ್ರಶಾಂತ್ ಕುಮಾರ್, ಇನಿಶಿಯೇಟಿವ್ ಮೀಡಿಯಾ (ಇಂಡಿಯಾ) ಪ್ರವೈಟ್ ಲಿಮಿಟೆಡ್‌ನ ವೈಶಾಲಿ ವರ್ಮಾ ಹಾಗೂ ಪಬ್ಲಿಸಿಸ್ ಮೀಡಿಯಾ ಇಂಡಿಯಾ ಗ್ರೂಪ್‌ನ ಸೆಜಲ್ ಶಾ.
ಸೆಕ್ರೇಟರಿಯೇಟ್:
ಹಾರ್ಮದ್ ಮಸಾನಿ (ಪ್ರಧಾನ ಕಾರ್ಯದರ್ಶಿ)