ಮ್ಯಾರಾಥಾನ್‌ ಬಳಿಕ ಬಾಕ್ಸಿಂಗ್‌ ಅಖಾಡಕ್ಕಿಳಿದ ರೋಬೋಟ್‌!

| Published : May 28 2025, 12:35 AM IST

ಮ್ಯಾರಾಥಾನ್‌ ಬಳಿಕ ಬಾಕ್ಸಿಂಗ್‌ ಅಖಾಡಕ್ಕಿಳಿದ ರೋಬೋಟ್‌!
Share this Article
  • FB
  • TW
  • Linkdin
  • Email

ಸಾರಾಂಶ

ಕೆಲ ತಿಂಗಳ ಹಿಂದೆ ರೋಬೋಟ್‌ಗಳನ್ನು ಮ್ಯಾರಾಥಾನ್‌ನಲ್ಲಿ ಓಡಿಸಿದ್ದ ಚೀನಿಯರು ಇದೀಗ ಅವುಗಳಿಂದ ವಿಶ್ವದಲ್ಲೇ ಮೊದಲ ಬಾರಿಗೆ ಬಾಕ್ಸಿಂಗ್‌ ಅನ್ನೂ ಮಾಡಿಸಿದ್ದಾರೆ.

ಬೀಜಿಂಗ್‌: ಕೆಲ ತಿಂಗಳ ಹಿಂದೆ ರೋಬೋಟ್‌ಗಳನ್ನು ಮ್ಯಾರಾಥಾನ್‌ನಲ್ಲಿ ಓಡಿಸಿದ್ದ ಚೀನಿಯರು ಇದೀಗ ಅವುಗಳಿಂದ ವಿಶ್ವದಲ್ಲೇ ಮೊದಲ ಬಾರಿಗೆ ಬಾಕ್ಸಿಂಗ್‌ ಅನ್ನೂ ಮಾಡಿಸಿದ್ದಾರೆ.

ಹ್ಯಾಂಗ್ಝೌನಲ್ಲಿ ಆಯೋಜನೆಗೊಂಡಿದ್ದ ಚೀನಾ ಮೀಡಿಯಾ ಗ್ರೂಪ್ ವಿಶ್ವ ರೋಬೋಟ್ ಸ್ಪರ್ಧೆಯಲ್ಲಿ ಯುನಿಟ್ರೀ ರೊಬೊಟಿಕ್ಸ್ ಕಂಪನಿಯ ರೋಬೋಟ್‌ಗಳು ಬಾಕ್ಸಿಂಗ್‌ ಮಾಡಿವೆ. ಅವುಗಳ ಕೈ, ಕಾಲುಗಳ ನಿಯಂತ್ರಿತ ಚಲನೆ, ನಿಖರ ಹೊಡೆತ, ತಪ್ಪಿಸಿಕೊಳ್ಳುವ ಶೈಲಿ ಇತ್ಯಾದಿಗಳು ನೋಡುಗರ ಮನ ಗೆದ್ದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುವ ಈ ಗುದ್ದಾಟದ ವಿಡಿಯೋ ತರಹೇವಾರಿ ಕಮೆಂಟ್‌ಗಳನ್ನು ಸೆಳೆಯುತ್ತಿದೆ. ‘ಸಿನಿಮಾಗಳಲ್ಲಿ ನೋಡಿದ್ದ ದೃಶ್ಯ ಇಂದು ನಿಜವಾಗಿ ನಡೆಯುತ್ತಿದೆ. ಲೋಹದ ತುಂಡುಗಳು ಮುಷ್ಟಿ ಕಟ್ಟಿ ಗುದ್ದಾಡುತ್ತಿವೆ’ ಎಂದು ಒಬ್ಬರು ಅಚ್ಚರಿ ವ್ಯಕ್ತಪಡಿಸಿದರೆ, ‘ಇದು ಮನರಂಜನೆಯಷ್ಟೇ ಅಲ್ಲ, ಹೊಸ ಜೀವಿಯ ಜನನ’ ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ.