ಸಾರಾಂಶ
ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ನಿಲ್ಲಿಸುವಂತೆ ವಿಶ್ವಸಂಸ್ಥೆಯಲ್ಲಿ ಮಂಡಿಸಿದ್ದ ಗೊತ್ತುವಳಿಗೆ ಭಾರತ ಬೆಂಬಲ ವ್ಯಕ್ತಪಡಿಸಿದೆ
ನವದೆಹಲಿ: ಆಧಾರ್ ಕಾರ್ಡ್ ತಿದ್ದುಪಡಿ, ನವೀಕರಣ, ಮಾಹಿತಿ ಸರಿಪಡಿಸುವಿಕೆ ಇತ್ಯಾದಿ ಸೇವೆಗಳಿಗೆ ಸೇವಾ ಕೇಂದ್ರಗಳು ಹೆಚ್ಚುವರಿ ಹಣ ಪಡೆದರೆ 50,000 ರು. ದಂಡ ಹಾಗೂ ಅಮಾನತು ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಲೋಕಸಭೆಗೆ ಲಿಖಿತ ರೂಪದಲ್ಲಿ ಉತ್ತರಿಸಿದ ಕೇಂದ್ರ ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್,‘ಆಧಾರ್ ಸೇವೆಗಳನ್ನು ಕೇಂದ್ರ, ರಾಜ್ಯ ಸರ್ಕಾರ ಹಾಗೂ ಅಧಿಕೃತ ಕೇಂದ್ರಗಳಲ್ಲಿ ಮಾಡಲಾಗುತ್ತದೆ. ಇದಕ್ಕಾಗಿ ಸರ್ಕಾರ ನಿಗದಿಪಡಿಸಿರುವ ಶುಲ್ಕವನ್ನು ಮಾತ್ರ ಪಡೆಯತಕ್ಕದ್ದು. ಹೆಚ್ಚುವರಿ ಹಣ ಪಡೆದರೆ ಅಂಥ ನೋಂದಣಿ ಮಾಡುವವರನ್ನು ಅಮಾನತು ಮಾಡಲಾಗುತ್ತದೆ ಹಾಗೂ 50,000 ರು. ದಂಡವನ್ನು ವಿಧಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.