ರಾಜ್ಯಸಭೆ ಚುನಾವಣೆ: ಬಿಜೆಪಿಗೆ ಸಿಂಹಪಾಲು

| Published : Feb 28 2024, 02:36 AM IST / Updated: Feb 28 2024, 11:44 AM IST

ರಾಜ್ಯಸಭೆ ಚುನಾವಣೆ: ಬಿಜೆಪಿಗೆ ಸಿಂಹಪಾಲು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಸಭೆಗೆ ಒಟ್ಟು 56 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇದರಲ್ಲಿ ಬಿಜೆಪಿಗೆ ಸಿಂಹಪಾಲು ಪ್ರಾಪ್ತಿಯಾಗಿದ್ದು 30 ಸೀಟಲ್ಲಿ ಗೆದ್ದಿದೆ.

ನವದೆಹಲಿ: ರಾಜ್ಯಸಭೆಗೆ ಒಟ್ಟು 56 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇದರಲ್ಲಿ ಬಿಜೆಪಿಗೆ ಸಿಂಹಪಾಲು ಪ್ರಾಪ್ತಿಯಾಗಿದ್ದು 30 ಸೀಟಲ್ಲಿ ಗೆದ್ದಿದೆ.56ರಲ್ಲಿ 41 ಮಂದಿ ಅವಿರೋಧ ಆಯ್ಕೆ ಆಗಿದ್ದರೆ, ಮಿಕ್ಕ 15ಕ್ಕೆ ಮತದಾನ ನಡೆದಿತ್ತು. ಇದರಲ್ಲಿ ಕರ್ನಾಟಕದ 4, ಉತ್ತರ ಪ್ರದೇಶದ 10 ಹಾಗೂ ಹಿಮಾಚಲ ಪ್ರದೇಶದ 1 ಸ್ಥಾನ ಇದ್ದವು. ಮತದಾನ ನಡೆದ 15 ಸ್ಥಾನದ ಪೈಕಿ ಬಿಜೆಪಿಗೆ 10, ಕಾಂಗ್ರೆಸ್‌ಗೆ 3 ಹಾಗೂ ಎಸ್ಪಿಗೆ 2 ಸ್ಥಾನ ಬಂದಿವೆ.

ಇನ್ನು ಅವಿರೋಧ ಆಯ್ಕೆಯಾದ 41 ಸ್ಥಾನದ ಪೈಕಿ ಬಿಜೆಪಿಗೆ 20, ಕಾಂಗ್ರೆಸ್‌ಗೆ 9 ಹಾಗೂ ಇತರರಿಗೆ 17 ಸ್ಥಾನ ಲಭಿಸಿವೆ.