ಸಾರಾಂಶ
ಮಾತುಕತೆಯಲ್ಲಿ ಪ್ರಗತಿ ಆಗದೇ ಹೋದಲ್ಲಿ ರಷ್ಯಾ- ಉಕ್ರೇನ್ ಸಂಧಾನ ಪ್ರಕ್ರಿಯೆಯಿಂದ ಹಿಂದೆ ಸರಿಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ, ಉಭಯ ದೇಶಗಳು ಶನಿವಾರ ಪರಸ್ಪರ ಕೈದಿಗಳ ವಿನಿಮಯ ಮಾಡಿಕೊಂಡಿವೆ
ಕೀವ್/ಮಾಸ್ಕೋ: ಮಾತುಕತೆಯಲ್ಲಿ ಪ್ರಗತಿ ಆಗದೇ ಹೋದಲ್ಲಿ ರಷ್ಯಾ- ಉಕ್ರೇನ್ ಸಂಧಾನ ಪ್ರಕ್ರಿಯೆಯಿಂದ ಹಿಂದೆ ಸರಿಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ, ಉಭಯ ದೇಶಗಳು ಶನಿವಾರ ಪರಸ್ಪರ ಕೈದಿಗಳ ವಿನಿಮಯ ಮಾಡಿಕೊಂಡಿವೆ. ಜೊತೆಗೆ ಈಸ್ಟರ್ ಹಿನ್ನೆಲೆಯಲ್ಲಿ 3 ದಿನ ಕದನ ವಿರಾಮ ಜಾರಿಗೆ ತರುವುದಾಗಿ ರಷ್ಯಾ ಘೋಷಿಸಿದೆ.
ಪರಸ್ಪರ ದೇಶಗಳ ವಶದಲ್ಲಿದ್ದ ನೂರಾರು ಕೈದಿಗಳನ್ನು ರಷ್ಯಾ ಮತ್ತು ಉಕ್ರೇನ್ ವಿನಿಮಯ ಮಾಡಿಕೊಂಡಿವೆ. ಇದು ಮೂರು ವರ್ಷಗಳ ಹಿಂದೆ ಯುದ್ಧ ಆರಂಭವಾದ ಬಳಿಕ ಅತಿದೊಡ್ಡ ಪ್ರಮಾಣದಲ್ಲಿ ಕೈದಿಗಳ ವಿನಿಮಯವಾಗಿದೆ. ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಜೆಲೆನ್‌ಸ್ಕಿ ಅವರೇ 277 ಉಕ್ರೇನಿಗರು ರಷ್ಯಾದಿಂದ ಉಕ್ರೇನ್‌ಗೆ ಮರಳಿದ್ದಾರೆ ಎಂದು ಘೋಷಿಸಿದ್ದಾರೆ. ಮತ್ತೊಂದೆಡೆ ರಷ್ಯಾ ರಕ್ಷಣಾ ಇಲಾಖೆ 245 ರಷ್ಯನ್ನರು ಉಕ್ರೇನ್‌ನಿಂದ ಬಂದಿದ್ದಾರೆ ಎಂದು ಹೇಳಿದೆ.
ಈ ಮಧ್ಯೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈಸ್ಟರ್ ಹಬ್ಬದ ನಿಮಿತ್ತ ಶನಿವಾರ ಸಂಜೆ 6 ಗಂಟೆಯಿಂದ ಸೋಮವಾರದವರೆಗೆ ಕದನ ವಿರಾಮವನ್ನು ಘೋಷಿಸಿದ್ದಾರೆ.