ದಕ್ಷಿಣ ಭಾರತೀಯರ ಪವಿತ್ರ ಕ್ಷೇತ್ರ ಶಬರಿಮಲೆಗೆ ತೆರಳುವ ಭಕ್ತರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ

| Published : Oct 27 2024, 02:19 AM IST / Updated: Oct 27 2024, 05:05 AM IST

ಸಾರಾಂಶ

ದಕ್ಷಿಣ ಭಾರತೀಯರ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಶಬರಿಮಲೆಗೆ ತೆರಳುವ ಭಕ್ತರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಜ.20ರವರೆಗೆ ವಿಮಾನದಲ್ಲಿ ತೆರಳುವ ಭಕ್ತರಿಗೆ ಕ್ಯಾಬಿನ್‌ನಲ್ಲಿ ಇರುಮುಡಿ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ 

ನವದೆಹಲಿ: ದಕ್ಷಿಣ ಭಾರತೀಯರ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಶಬರಿಮಲೆಗೆ ತೆರಳುವ ಭಕ್ತರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಜ.20ರವರೆಗೆ ವಿಮಾನದಲ್ಲಿ ತೆರಳುವ ಭಕ್ತರಿಗೆ ಕ್ಯಾಬಿನ್‌ನಲ್ಲಿ ಇರುಮುಡಿ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮ್‌ಮೋಹನ್‌ ನಾಯ್ಡು ಹೇಳಿದ್ದಾರೆ.

ಶನಿವಾರ ಮಾತನಾಡಿದ ಅವರು,‘ಜ.20ರವರೆಗೆ ವಿಮಾನದ ಕ್ಯಾಬಿನ್‌ನಲ್ಲಿ ಇರುಮುಡಿ (ಪವಿತ್ರ ತೆಂಗಿನಕಾಯಿ) ತೆಗೆದುಕೊಂಡು ಹೋಗಲು ವಿಮಾನಯಾನ ಸುರಕ್ಷತಾ ಬ್ಯೂರೋ (ಬಿಸಿಎಎಸ್‌) ಅನುಮತಿ ನೀಡಿದೆ. ಇವುಗಳನ್ನು ಭದ್ರತಾ ತಪಾಸಣೆ ಬಳಿಕ ಒಳಗೆ ಬಿಡಲಾಗುತ್ತದೆ. ಈ ಕ್ರಮದಿಂದ ಲಕ್ಷಾಂತರ ಅಯ್ಯಪ್ಪಸ್ವಾಮಿ ಭಕ್ತರಿಕೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.

ತೆಂಗಿನ ಕಾಯಿ ಬೆಂಕಿ ಹೊತ್ತಿಕೊಳ್ಳುವ ಗುಣ ಹೊಂದಿರುವ ಕಾರಣ ಅವುಗಳನ್ನು ಸಾಮಾನ್ಯ ದಿನಗಳಲ್ಲಿ ವಿಮಾನದಲ್ಲಿ ನಿಷೇಧಿಸಲಾಗಿದೆ.