ಸದ್ಗುರು ಸಂಪೂರ್ಣ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

| Published : Mar 28 2024, 12:52 AM IST / Updated: Mar 28 2024, 08:11 AM IST

ಸಾರಾಂಶ

ಈಶ ಪ್ರತಿಷ್ಠಾನದ ಮುಖ್ಯಸ್ಥ ಹಾಗೂ ಆಧ್ಯಾತ್ಮಿಕ ಚಿಂತಕ ಸದ್ಗುರು ಅವರು ಬುಧವಾರ ದಿಲ್ಲಿ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು.

ನವದೆಹಲಿ: ಈಶ ಪ್ರತಿಷ್ಠಾನದ ಮುಖ್ಯಸ್ಥ ಹಾಗೂ ಆಧ್ಯಾತ್ಮಿಕ ಚಿಂತಕ ಸದ್ಗುರು ಅವರು ಬುಧವಾರ ದಿಲ್ಲಿ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು.

ಈ ಕುರಿತು ಮಾಹಿತಿ ನೀಡಿದ ಆಸ್ಪತ್ರೆಯ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಸಂಗೀತ ರೆಡ್ಡಿ, ‘ಸದ್ಗುರು ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಅವರ ಚೇತರಿಕೆಯ ಕುರಿತು ಆಶಾಭಾವ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರನ್ನು ದಿಸ್‌ಚಾರ್ಜ್‌ ಮಾಡಲಾಗುತ್ತಿದೆ. 

ಅವರು ಚೇತರಿಕೆಗೊಳ್ಳುವ ಸಮಯದಲ್ಲೂ ಅವರ ಉತ್ಸಾಹಭರಿತರಾಗಿದ್ದರು. ಇದರಿಂದ ಅವರ ಲಕ್ಷಾಂತರ ಅನುಯಾಯಿಗಳಿಗೆ ಸಂತಸವಾಗಲಿದೆ ಎಂದು ಭಾವಿಸಿದ್ದೇನೆ’ ಎಂದು ತಿಳಿಸಿದ್ದಾರೆ.

ಮಿದುಳಿನಲ್ಲಿ ರಕ್ತಸ್ರಾವ ಸಮಸ್ಯೆ ಆದ ಕಾರಣ ಅವರು ಮಾರ್ಚ್ 17 ರಂದು ಇಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ಅವರು ಕೆಲವು ವಾರಗಳವರೆಗೆ ತೀವ್ರ ತಲೆನೋವು ಅನುಭವಿಸುತ್ತಿದ್ದರು. 

ಈಗ ಅವರು ಸಂಪೂರ್ಣ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆಯೇ ನೆರೆದಿದ್ದ ಜನರು ಹಾಗೂ ಛಾಯಾಗ್ರಾಹಕರಿಗೆ ಅವರು ಕೈ ಎತ್ತಿ ನಮಿಸಿದರು.