ಸಲಿಂಗ ವಿವಾಹಕ್ಕೆ 34 ದೇಶಗಳಲ್ಲಿದೆ ಕಾನೂನು ಮಾನ್ಯತೆ
KannadaprabhaNewsNetwork | Published : Oct 18 2023, 01:00 AM IST
ಸಲಿಂಗ ವಿವಾಹಕ್ಕೆ 34 ದೇಶಗಳಲ್ಲಿದೆ ಕಾನೂನು ಮಾನ್ಯತೆ
ಸಾರಾಂಶ
ಸಲಿಂಗ ವಿವಾಹಕ್ಕೆ ಭಾರತದಲ್ಲಿ ಕಾನೂನು ಮಾನ್ಯತೆ ಇನ್ನೂ ಸಿಕ್ಕಿಲ್ಲವಾದರೂ ಪ್ರಪಂಚದ 34 ದೇಶಗಳಲ್ಲಿ ಇದಕ್ಕೆ ಕಾನೂನು ಮಾನ್ಯತೆ ಇದೆ. ಅಲ್ಲಿ ಸಲಿಂಗಿ ದಂಪತಿಗಳು ಸಾಮಾನ್ಯ ದಂಪತಿಗಳಂತೆಯೇ ಎಲ್ಲ ಸೌಲಭ್ಯ ಸವಲತ್ತುಗಳನ್ನುಪಡೆಯುವ ಹಕ್ಕುಳ್ಳವರಾಗಿರುತ್ತಾರೆ.
ನವದೆಹಲಿ: ಸಲಿಂಗ ವಿವಾಹಕ್ಕೆ ಭಾರತದಲ್ಲಿ ಕಾನೂನು ಮಾನ್ಯತೆ ಇನ್ನೂ ಸಿಕ್ಕಿಲ್ಲವಾದರೂ ಪ್ರಪಂಚದ 34 ದೇಶಗಳಲ್ಲಿ ಇದಕ್ಕೆ ಕಾನೂನು ಮಾನ್ಯತೆ ಇದೆ. ಅಲ್ಲಿ ಸಲಿಂಗಿ ದಂಪತಿಗಳು ಸಾಮಾನ್ಯ ದಂಪತಿಗಳಂತೆಯೇ ಎಲ್ಲ ಸೌಲಭ್ಯ ಸವಲತ್ತುಗಳನ್ನುಪಡೆಯುವ ಹಕ್ಕುಳ್ಳವರಾಗಿರುತ್ತಾರೆ. 2010ರಿಂದ ಹಲವು ದೇಶಗಳಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ದೊರಕಿದ್ದು, ಅಮೆರಿಕ, ಇಂಗ್ಲೆಂಡ್, ಮೆಕ್ಸಿಕೊ, ಆಸ್ಟ್ರೇಲಿಯಾ, ಜರ್ಮನಿ, ಸ್ಕಾಟ್‌ಲ್ಯಾಂಡ್, ಉತ್ತರ ಐರ್ಲೆಂಡ್, ಅಂಡೋರ ಮುಂತಾದ ದೇಶಗಳು ಕಾನೂನು ಮಾನ್ಯತೆ ನೀಡಿವೆ. ಎಸ್ಟೋನಿಯಾದಲ್ಲಿ ಮುಂದಿನ ವರ್ಷ ಕಾನೂನು ಮಾನ್ಯತೆ ದೊರೆಯಲಿದೆ. ಕೆಲವು ದೇಶಗಳಲ್ಲಿ ವಿವಾಹಕ್ಕೆ ಮಾನ್ಯತೆ ದೊರಕಿಲ್ಲವಾದರೂ ಸಲಿಂಗಿ ಜೋಡಿಗಳಿಗೆ ಕಾನೂನು ಮಾನ್ಯತೆ ಇದೆ. ಅಲ್ಲಿ ಸಹಜೀವನ ನಡೆಸುವವರು(ಲಿವ್-ಇನ್) ಕಾನೂನು ಮಾನ್ಯತೆ ಪಡೆಯಲು ಸಿವಿಲ್ ಯೂನಿಯನ್‌ಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ ನೊಂದಾಯಿತರಾಗಲು ಅವಕಾಶವಿದೆ. ಡೆನ್ಮಾರ್ಕ್ ಈ ಪದ್ಧತಿಯನ್ನು ಅಳವಡಿಸಿಕೊಂಡ ಪ್ರಥಮ ರಾಷ್ಟ್ರವಾಗಿದ್ದು, 1989ರಲ್ಲಿ ಸಿವಿಲ್ ಯೂನಿಯನ್‌ಗಳನ್ನು ಸ್ಥಾಪಿಸಿದೆ. ಬ್ರೆಜಿ಼ಲ್, ಜಪಾನ್, ಚಿಲಿ, ಸ್ಲೊವೇನಿಯಾ ಮುಂತಾದ ದೇಶಗಳಲ್ಲಿ ಹೀಗೆ ಸಿವಿಲ್ ಯೂನಿಯನ್‌ಗಳಲ್ಲಿ ನೊಂದಾಯಿತರಾದ ಸಲಿಂಗಿ ಜೋಡಿಗಳಿಗೆ ಕಾನೂನು ಮಾನ್ಯತೆ ಇದೆ.