ಸಾರಾಂಶ
ಚುನಾವಣಾ ಆಯೋಗವು ಬಿಜೆಪಿಯ ಪಂಜರದ ಗಿಳಿಯಾಗಿದ್ದು, ಧರ್ಮ ಆಧಾರಿತ ಪ್ರಚಾರದಲ್ಲಿ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ.
ಮುಂಬೈ: ಚುನಾವಣಾ ಆಯೋಗವು ಬಿಜೆಪಿಯ ಪಂಜರದ ಗಿಳಿಯಾಗಿದ್ದು, ಧರ್ಮ ಆಧಾರಿತ ಪ್ರಚಾರದಲ್ಲಿ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ. ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ರಾವತ್, ‘ನಮ್ಮ ಪಕ್ಷದ ಶಾಸಕರನ್ನು ಧರ್ಮ ಆಧಾರಿತವಾಗಿ ಪ್ರಚಾರ ಮಾಡಿದ ಆರೋಪದ ಮೇಲೆ 6 ವರ್ಷಗಳ ಕಾಲ ಆಯೋಗ ಅನರ್ಹಗೊಳಿಸಿತ್ತು. ಆದರೆ ಅಮಿತ್ ಶಾ ಅವರು ಪಂಚರಾಜ್ಯ ಚುನಾವಣಾ ಪ್ರಚಾರದಲ್ಲಿ ಅಯೋಧ್ಯೆ ರಾಮ ಮಂದಿರಕ್ಕೆ ಉಚಿತ ಪ್ರವಾಸ ಆಯೋಜಿಸುತ್ತೇವೆಂದು ಅನೇಕ ಬಾರಿ ಹೇಳಿದ್ದರೂ ಚುನಾವಣಾ ಆಯೋಗ ಕನಿಷ್ಠ ಪಕ್ಷ ನೋಟಿಸ್ ಕೂಡ ನೀಡಿಲ್ಲ’ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.