ಬಿಜೆಪಿ ರಾಜಕೀಯ ವೇಶ್ಯಾಗೃಹ ನಡೆಸುತ್ತಿದೆ: ಸಂಸದ ರಾವುತ್‌ ಕೀಳು ಹೇಳಿಕೆ

| Published : Feb 19 2024, 01:32 AM IST

ಬಿಜೆಪಿ ರಾಜಕೀಯ ವೇಶ್ಯಾಗೃಹ ನಡೆಸುತ್ತಿದೆ: ಸಂಸದ ರಾವುತ್‌ ಕೀಳು ಹೇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ತನಗೆ ಸಂಪೂರ್ಣ ಬಹುಮತದ ಕಾರಣ ಬಿಜೆಪಿಯು ರಾಜಕೀಯ ವೇಶ್ಯಾಗೃಹ ಪ್ರಾರಂಭಿಸಿ ಇತರ ಪಕ್ಷದವರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ ಎಂದು ಸಂಜಯ್‌ ರಾವುತ್‌ ತಮ್ಮ ಅಂಕಣದಲ್ಲಿ ಟೀಕಿಸಿದ್ದಾರೆ.

ಮುಂಬೈ: ಮಹಾರಾಷ್ಟ್ರದ ಕಾಂಗ್ರೆಸ್‌ ನಾಯಕರ ಬಿಜೆಪಿ ವಲಸೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಉದ್ಧವ್‌ ಠಾಕ್ರೆ ಬಣದ ಶಿವಸೇನೆ ಸಂಸದ ಸಂಜಯ್‌ ರಾವುತ್‌, ರಾಜ್ಯದಲ್ಲಿ ಬಿಜೆಪಿ ರಾಜಕೀಯ ವೇಶ್ಯಾಗೃಹ ನಡೆಸುತ್ತಿದೆ ಎಂಬ ಕೀಳು ಹೇಳಿಕೆ ನೀಡಿದ್ದಾರೆ.

ಆರ್‌ಎಸ್‌ಎಸ್‌ನ ಸಮೀಕ್ಷೆ ಅನ್ವಯ ಬಿಜೆಪಿ ಈ ಬಾರಿ ದೇಶಾದ್ಯಂತ ಕೇವಲ 190 ಸ್ಥಾನ ಗೆಲ್ಲಲಿದೆ.

ಹೀಗಾಗಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಬೇರೆ ಬೇರೆ ಪಕ್ಷಗಳ ನಾಯಕರನ್ನು ತನ್ನತ್ತ ಸೆಳೆಯುವ ಮೂಲಕ ರಾಜಕೀಯ ವೇಶ್ಯಾಗೃಹ ಆರಂಭಿಸಿದೆ ಎಂದು ಪಕ್ಷದ ಮುಖವಾಣಿ ಸಾಮ್ನಾದ ‘ರೋಕ್‌ತೋಕ್‌’ ಅಂಕಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.