ಮಣಿಪುರ ಜನಾಂಗೀಯ ಹಿಂಸಾಚಾರದಲ್ಲಿ ಸಿಎಂ ಬಿರೇನ್ ಸಿಂಗ್ ಕೈವಾಡ : ವರದಿ ಕೇಳಿದ ಸುಪ್ರೀಂಕೋರ್ಟ್

| N/A | Published : Feb 04 2025, 12:30 AM IST / Updated: Feb 04 2025, 03:55 AM IST

ಸಾರಾಂಶ

ಮಣಿಪುರದ ಜನಾಂಗೀಯ ಹಿಂಸಾಚಾರದಲ್ಲಿ ಸಿಎಂ ಬಿರೇನ್ ಸಿಂಗ್ ಭಾಗಿಯಾಗಿದ್ದಾರೆ ಎಂದು ಆರೋಪಕ್ಕೆ ಕಾರಣವಾಗಿರುವ ಆಡಿಯೋ ಕುರಿತು ಸುಪ್ರೀಂಕೋರ್ಟ್ ಸೋಮವಾರ ಎಫ್‌ಎಸ್‌ಎಲ್ ವರದಿ ಕೇಳಿದೆ.

ನವದೆಹಲಿ: ಮಣಿಪುರದ ಜನಾಂಗೀಯ ಹಿಂಸಾಚಾರದಲ್ಲಿ ಸಿಎಂ ಬಿರೇನ್ ಸಿಂಗ್ ಭಾಗಿಯಾಗಿದ್ದಾರೆ ಎಂದು ಆರೋಪಕ್ಕೆ ಕಾರಣವಾಗಿರುವ ಆಡಿಯೋ ಕುರಿತು ಸುಪ್ರೀಂಕೋರ್ಟ್ ಸೋಮವಾರ ಎಫ್‌ಎಸ್‌ಎಲ್ ವರದಿ ಕೇಳಿದೆ.

ಇತ್ತೀಚೆಗೆ ಸೋರಿಕೆಯಾದ ಆಡಿಯೋವೊಂದರಲ್ಲಿ ವ್ಯಕ್ತಿಯೊಬ್ಬರು ‘ಮೈತೇಯಿಗಳು ಬಂಧನವಾಗದಂತೆ ನಾನು ನೋಡಿಕೊಂಡಿದ್ದೇನೆ ಮತ್ತು ಅವರು ಠಾಣೆಗಳಿಂದ ಶಸ್ತ್ರಾಸ್ತ್ರ ಲೂಟಿ ಮಾಡಲು ಅವಕಾಶ ಕೊಟ್ಟಿದ್ಧೇನೆ’ ಎಂದು ಹೇಳಿದ್ದ ಅಂಶಗಳಿದ್ದವು. ಈ ಆಡಿಯೋ ಕುರಿತ ಕುಕಿ ಆರ್ಗನೈಸೇಶನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್ ಖಾಸಗಿಯೊಂದರಿಂದ ಧ್ವನಿ ಪರೀಕ್ಷೆ ನಡೆಸಿತ್ತು. ಅದರಲ್ಲಿ ಆಡಿಯೋದಲ್ಲಿರುವ ಧ್ವನಿಯ ಶೇ.93ರಷ್ಟು ಸಿಎಂ ಬಿರೇನ್‌ಗೆ ಹೋಲಿಕೆಯಾಗುತ್ತಿದೆ ಎಂದು ಆರೋಪಿಸಿ ಈ ಬಗ್ಗೆ ತನಿಖೆಗೆ ಮನವಿ ಮಾಡಿತ್ತು.

ಈ ಅರ್ಜಿ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾ.ಸಂಜಯ್ ಕುಮಾರ್ ಅವರ ಪೀಠವು ಆಡಿಯೋ ಬಗ್ಗೆ ಸ್ವತಂತ್ರ ತನಿಖೆಗೆ ಎಫ್‌ಎಸ್‌ಎಲ್‌ಗೆ ಸೂಚಿಸಿದೆ.2023ರ ಮೇನಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಸಂಘರ್ಷದಲ್ಲಿ 200ಕ್ಕೂ ಅಧಿಕ ಜನ ಸಾವನ್ನಪ್ಪಿ, ಸಾವಿರಾರು ಜನ ನಿರಾಶ್ರಿತರಾಗಿದ್ದರು.