ಕನ್ನಡಿಗ ಸುಪ್ರೀಂ ಜಡ್ಜ್‌ ಎ.ಎಸ್‌. ಬೋಪಣ್ಣ ನಿವೃತ್ತಿ

| Published : May 18 2024, 12:31 AM IST / Updated: May 18 2024, 06:39 AM IST

supreme court 02.jpg

ಸಾರಾಂಶ

ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾ। ಎ.ಎಸ್‌. ಬೋಪಣ್ಣ ಶುಕ್ರವಾರ ನಿವೃತ್ತರಾದರು. ಇವರಿಗೆ ಮುಖ್ಯ ನ್ಯಾ। ಡಿ.ವೈ.ಚಂದ್ರಚೂಡ್‌ ಅವರು ಬೀಳ್ಕೊಟ್ಟರು.

ನವದೆಹಲಿ: ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾ। ಎ.ಎಸ್‌. ಬೋಪಣ್ಣ ಶುಕ್ರವಾರ ನಿವೃತ್ತರಾದರು. ಇವರಿಗೆ ಮುಖ್ಯ ನ್ಯಾ। ಡಿ.ವೈ.ಚಂದ್ರಚೂಡ್‌ ಅವರು ಬೀಳ್ಕೊಟ್ಟರು. 

1959ರಲ್ಲಿ ಜನಿಸಿದ ಬೋಪಣ್ಣ ಅವರು 1984ರಲ್ಲಿ ವಕೀಲರಾಗಿ ಸೇವೆ ಆರಂಭಿಸಿದರು. ಬಳಿಕ 2006ರಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. 

ಬಳಿಕ 2007ರಲ್ಲಿ ಖಾಯಂ ಆಗಿ ಸೇವೆ ಆರಂಭಿಸಿದರು. 2018ರಲ್ಲಿ ಗುವಾಹಟಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ವಹಿಸಿಕೊಂಡಿದ್ದರು. ಬಳಿಕ 2019ರಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿದರು. 2016ರಲ್ಲಿ ನೋಟು ಅಮಾನ್ಯೀಕರಣ ನಿರ್ಧಾರದ ವಿರುದ್ಧ ಸಲ್ಲಿಸಿದ್ದ ಅರ್ಜಿಗಳ ತೀರ್ಪು ನೀಡುವಲ್ಲಿ ಇವರೂ ಒಬ್ಬರಾಗಿದ್ದರು.