ಸಂಸದ ರಾಘವ್‌ ಛಡ್ಡಾ ಅಮಾನತು: ಇಂದು ಸುಪ್ರೀಂನಲ್ಲಿ ವಿಚಾರಣೆ

| Published : Oct 16 2023, 01:45 AM IST / Updated: Oct 16 2023, 12:32 PM IST

Parineeti Chopra and Raghav Chadha

ಸಾರಾಂಶ

ರಾಜ್ಯಸಭೆಯಿಂದ ಅನಿರ್ಧಿಷ್ಟಾವಧಿಗೆ ಅಮಾನತಾಗಿರುವ ಆಪ್‌ ಸಂಸದ ರಾಘವ್‌ ಛಡ್ಡಾ ಅವರ ಅರ್ಜಿಯನ್ನು ಸೋಮವಾರ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಲಿದೆ.
ನವದೆಹಲಿ: ರಾಜ್ಯಸಭೆಯಿಂದ ಅನಿರ್ಧಿಷ್ಟಾವಧಿಗೆ ಅಮಾನತಾಗಿರುವ ಆಪ್‌ ಸಂಸದ ರಾಘವ್‌ ಛಡ್ಡಾ ಅವರ ಅರ್ಜಿಯನ್ನು ಸೋಮವಾರ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಲಿದೆ. ರಾಜ್ಯಸಭೆಯಲ್ಲಿ ಐವರು ಸಂಸದರ ನಕಲಿ ಸಹಿ ಮಾಡಿದ್ದಕ್ಕೆ ಅನಿರ್ಧಿಷ್ಟಾವಧಿವರೆಗೆ ಅಮಾನತಾಗಿರುವ ಸಂಸದ ರಾಘವ್‌, ಇದು ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ನಡೆಯುವ ವಿಚಾರಣೆ ಮುಖ್ಯ ನ್ಯಾಯಾಧೀಶ ಡಿವೈ.ಚಂದ್ರಚೂಡ್‌ ಪೀಠ ವಿಚಾರಣೆ ನಡೆಸಲಿದೆ. ಆ.11ರಂದು ದೆಹಲಿ ಆಡಳಿತ ಮಸೂದೆ ಮಂಡನೆ ವೇಳೆ ಛಡ್ಡಾ, ಬಿಜೆಪಿ ಮೂವರು ಸಂಸದರು ಸೇರಿ ಐವರು ಸಂಸದರ ನಕಲಿ ಸಹಿಗಳನ್ನು ಮಾಡಿದ್ದರು ಎಂಬ ಆರೋಪವಿದೆ.