ಮುಂಬೈ ಕರಾವಳಿ ತೀರದಲ್ಲಿ ಶಂಕಿತ ಪಾಕ್‌ ಬೋಟ್‌ ಪತ್ತೆ

| N/A | Published : Jul 07 2025, 11:48 PM IST / Updated: Jul 08 2025, 05:41 AM IST

ಮುಂಬೈ ಕರಾವಳಿ ತೀರದಲ್ಲಿ ಶಂಕಿತ ಪಾಕ್‌ ಬೋಟ್‌ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಬೈಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ರೇವ್ಡಂಡ ಕರಾವಳಿ ತೀರದಲ್ಲಿ ಪಾಕಿಸ್ತಾನಕ್ಕೆ ಸೇರಿದ್ದು ಎನ್ನಲಾದ ಬೋಟ್‌ ಒಂದರ ಶಂಕಾಸ್ಪದ ಚಲನವಲನ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅದರ ಪತ್ತೆಗಾಗಿ ಭದ್ರತಾ ಪಡೆಗಳು ಭಾರೀ ಕಾರ್ಯಾಚರಣೆ ನಡೆಸಿವೆ.

ಮುಂಬೈ: ಮುಂಬೈಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ರೇವ್ಡಂಡ ಕರಾವಳಿ ತೀರದಲ್ಲಿ ಪಾಕಿಸ್ತಾನಕ್ಕೆ ಸೇರಿದ್ದು ಎನ್ನಲಾದ ಬೋಟ್‌ ಒಂದರ ಶಂಕಾಸ್ಪದ ಚಲನವಲನ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅದರ ಪತ್ತೆಗಾಗಿ ಭದ್ರತಾ ಪಡೆಗಳು ಭಾರೀ ಕಾರ್ಯಾಚರಣೆ ನಡೆಸಿವೆ.

ಭಾನುವಾರ ರಾತ್ರಿ ರೇವ್ದಂಡದ ಕೊರ್ಲೈ ಕರಾವಳಿಯಿಂದ 2 ನಾಟಿಕಲ್ ಮೈಲು ದೂರದಲ್ಲಿ ಭಾರತೀಯ ನೌಕಾಪಡೆಯ ರಡಾರ್‌ನಲ್ಲಿ ಬೋಟ್‌ನ ಶಂಕಾಸ್ಪದ ಚಲನವಲನ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಯಗಢ ಪೊಲೀಸರು, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ತುರ್ತು ಪ್ರತಿಕ್ರಿಯಾ ತಂಡ, ನೌಕಾಪಡೆ ಹಾಗೂ ಕಡಲ ಭದ್ರತಾ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ, ಹುಡುಕಾಟ ಆರಂಭಿಸಿದ್ದಾರೆ.

ರಾಯಗಢ ಪೊಲೀಸ್ ಮಹಾನಿರ್ದೇಶಕಿ ಅಂಚಲ್ ದಲಾಲ್ ಸ್ವತಃ ಬಾರ್ಜ್ ಬಳಸಿ ಬೋಟ್‌ ಇದ್ದ ಸ್ಥಳದ ಬಳಿಗೆ ಹೋಗಲು ಪ್ರಯತ್ನಿಸಿದರು, ಆದರೆ ಪ್ರತಿಕೂಲ ಹವಾಮಾನದಿಂದಾಗಿ ಹಿಂತಿರುಗಬೇಕಾಯಿತು. ಶಂಕಾಸ್ಪದ ಬೋಟ್‌ ಪತ್ತೆ ಹಿನ್ನೆಲೆಯಲ್ಲಿ ರಾಯಗಢದ ಕರಾವಳಿಯುದ್ದಕ್ಕೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾದ್ಯಂತ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2008ರ ನವೆಂಬರ್‌ನಲ್ಲಿ ಮುಂಬೈ ಸರಣಿ ಸ್ಫೋಟಕ್ಕೂ ಮುನ್ನ 10 ಉಗ್ರರು ರಾತ್ರಿ ವೇಳೆ ಪಾಕಿಸ್ತಾನದಿಂದ ಮುಂಬೈ ಕಡಲ ತೀರಕ್ಕೆ ಬಂದಿದ್ದರು. ಛತ್ರಪತಿ ಶಿವಾಜಿ ರೈಲು ನಿಲ್ದಾಣ, ಹೊಟೆಲ್ ಒಬೆರಾಯ್ ಮೇಲೆ ದಾಳಿ ನಡೆಸಿದ್ದರು. ಘಟನೆಯಲ್ಲಿ 166 ಜನ ಪ್ರಾಣ ಕಳೆದುಕೊಂಡಿದ್ದರು. ಈ ಹಿನ್ನೆಲೆ ಭಾನುವಾರ ಪತ್ತೆಯಾದ ಹಡಗಿನ ಕುರಿತು ತೀವ್ರ ನಿಗಾ ವಹಿಸಲಾಗಿದೆ.

  •  ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ರೇವ್ಡಂಡ ಕರಾವಳಿ ತೀರದಲ್ಲಿ ಪಾಕಿಸ್ತಾನಕ್ಕೆ ಸೇರಿದ್ದು ಎನ್ನಲಾದ ಬೋಟ್‌ ಒಂದರ ಶಂಕಾಸ್ಪದ ಚಲನವಲನ
  • ಕೊರ್ಲೈ ಕರಾವಳಿಯಿಂದ 2 ನಾಟಿಕಲ್ ಮೈಲು ದೂರದಲ್ಲಿ ಭಾರತೀಯ ನೌಕಾಪಡೆಯ ರಡಾರ್‌ನಲ್ಲಿ ಬೋಟ್‌ನ ಶಂಕಾಸ್ಪದ ಚಲನವಲನ ಪತ್ತೆ
  • ರಾಡಾರ್‌ ಕಣ್ಣಿಗೆ ಬಿದ್ದ ಬೋಟ್‌ಗಾಗಿ ತೀವ್ರ ಹುಡುಕಾಟ
  • ಈ ಹಿಂದಿನ ದಾಳಿಗಳ ವೇಳೆ ಬೋಟಲ್ಲೇ ಉಗ್ರ ಪಯಣ

Read more Articles on