ಷೇರು ಮಾರುಕಟ್ಟೆ ನಿಯಂತ್ರಕ ‘ಸೆಬಿ’ಯಿಂದ ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯಗೆ ನಿರ್ಬಂಧ

| Published : Jul 27 2024, 12:55 AM IST / Updated: Jul 27 2024, 06:14 AM IST

Vijay Mallya

ಸಾರಾಂಶ

ಷೇರು ಮಾರುಕಟ್ಟೆ ನಿಯಂತ್ರಕ ‘ಸೆಬಿ’, ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಅವರು ದೇಶದ ಷೇರು ಮಾರುಕಟ್ಟೆಯಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ವಹಿವಾಟು ನಡೆಸದಂತೆ ಮತ್ತು 3 ವರ್ಷಗಳವರೆಗೆ ಯಾವುದೇ ಲಿಸ್ಟೆಡ್ ಕಂಪನಿಗಳ ಜತೆ ವ್ಯವಹಾರ ನಡೆಸದಂತೆ ನಿರ್ಬಂಧಿಸಿದೆ.

ಮುಂಬೈ: ಷೇರು ಮಾರುಕಟ್ಟೆ ನಿಯಂತ್ರಕ ‘ಸೆಬಿ’, ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಅವರು ದೇಶದ ಷೇರು ಮಾರುಕಟ್ಟೆಯಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ವಹಿವಾಟು ನಡೆಸದಂತೆ ಮತ್ತು 3 ವರ್ಷಗಳವರೆಗೆ ಯಾವುದೇ ಲಿಸ್ಟೆಡ್ ಕಂಪನಿಗಳ ಜತೆ ವ್ಯವಹಾರ ನಡೆಸದಂತೆ ನಿರ್ಬಂಧಿಸಿದೆ.

ಶುಕ್ರವಾರ ಹೇಳಿಕೆ ನೀಡಿರುವ ಸೆಬಿ, ’ಮಲ್ಯ ಅವರ ಮ್ಯೂಚುಯಲ್ ಫಂಡ್ ಯೂನಿಟ್‌ಗಳು ಸೇರಿದಂತೆ ಎಲ್ಲಾ ಷೇರು ಹಿಡುವಳಿಗಳನ್ನು ಫ್ರೀಜ್ ಮಾಡಬೇಕು’ ಎಂದು ನಿರ್ದೇಶಿಸಿದೆ.

ಮ್ಯಾಟರ್‌ಹಾರ್ನ್ ವೆಂಚರ್ಸ್ ಎಂಬ ಹೆಸರಿನ ವಿದೇಶಿ ಸಾಂಸ್ಥಿಕ ಹೂಡಿಕೆ ಕಂಪನಿ ಮೂಲಕ ಮಲ್ಯ ಅವರು ಭಾರತದಲ್ಲಿ ಪರೋಕ್ಷವಾಗಿ ವ್ಯಾಪಾರ ಮಾಡುತ್ತಾರೆ. ಈ ಮೂಲಕ ಅವರ ಷೇರುಪೇಟೆಯಲ್ಲಿ ನಿಜವಾದ ಗುರುತನ್ನು ಮರೆಮಾಚುತ್ತಾರೆ. ಹೀಗಾಗಿ ಸೆಬಿ ಈ ಕ್ರಮ ಜರುಗಿಸಿದೆ.

ವಿಜಯ್ ಮಲ್ಯ ಕಿಂಗ್‌ಫಿಶರ್ ಬಿಯರ್ ತಯಾರಕ ಯುನೈಟೆಡ್ ಬ್ರೂವರೀಸ್‌ನಲ್ಲಿ 8.1% ಪಾಲನ್ನು ಹೊಂದಿದ್ದಾರೆ, ಸ್ಮಿರ್ನಾಫ್ ವೋಡ್ಕಾ ತಯಾರಕ ಯುನೈಟೆಡ್ ಸ್ಪಿರಿಟ್ಸ್‌ನಲ್ಲಿ 0.01% ಪಾಲನ್ನು ಹೊಂದಿದ್ದಾರೆ.

ಬ್ಯಾಂಕ್‌ಗಳಿಗೆ 9000 ಕೋಟಿ ರು. ಸಾಲ ವಂಚನೆ ಮಾಡಿ ಬ್ರಿಟನ್‌ನಲ್ಲಿ ನೆಲೆಸಿರುವ ವಿಜಯ್ ಮಲ್ಯ (68) ಅವರನ್ನು ಭಾರತಕ್ಕೆ ಗಡೀಪಾರು ಮಾಡಿ ತರಲು ಮೋದಿ ಸರ್ಕಾರ ಯತ್ನಿಸುತ್ತಿದೆ. ಆದರೆ ನಾನಾ ಕಾನೂನು ಅಡ್ಡಿಗಳ ಕಾರಣ ಈವರೆಗೂ ಅದು ಕೈಗೂಡಿಲ್ಲ