ಸಾರಾಂಶ
ತಮಿಳುನಾಡಿನಲ್ಲಿ ಜಾತ್ಯತೀತ ಪ್ರಜಾಸತ್ತಾತ್ಮಕ ಒಕ್ಕೂಟ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದ್ದು, ಸಿಪಿಐ ಮತ್ತು ಸಿಪಿಎಂ ತಲಾ 2, ಐಯುಎಂಎಲ್ ಮತ್ತು ಕೆಎಂಡಿಕೆ ತಲಾ 1 ಹಾಗೂ ಉಳಿದ ಸ್ಥಾನಗಳಲ್ಲಿ ಡಿಎಂಕೆ ಸ್ಪರ್ಧಿಸಲಿದೆ.
ಚೆನ್ನೈ: ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಜಾಸತ್ತಾತ್ಮಕ ಒಕ್ಕೂಟ (ಎಸ್‌ಪಿಎ) ಮುಂಬರುವ ಲೋಕಸಭಾ ಚುನಾವಣೆಗೆ ಸಿಟು ಹಂಚಿಕೆಯನ್ನು ಅಂತಿಮಗೊಳಿಸಿದ್ದು, ಎಡಪಕ್ಷಗಳಾದ ಸಿಪಿಐ ಮತ್ತು ಸಿಪಿಎಂಗೆ ತಲಾ 2 ಸೀಟು ಬಿಟ್ಟುಕೊಡಲು ಡಿಎಂಕೆ ಸಮ್ಮತಿಸಿದೆ. ಇದಕ್ಕೂ ಮೊದಲು ಮೈತ್ರಿಕೂಟದ ಇತರ ಪಕ್ಷಗಳಾದ ಇಂಡಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮತ್ತು ಕೆಎಂಡಿಕೆ ಪಕ್ಷಗಳಿಗೆ ತಲಾ 1 ಸೀಟು ಬಿಟ್ಟು ಕೊಡಲಾಗಿತ್ತು. ಕಳೆದ ಬಾರಿ ಡಿಎಂಕೆ ನೇತೃತ್ವದ ಎಸ್‌ಪಿಎ ಮೈತ್ರಿಕೂಟ ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳ ಪೈಕಿ 38 ಸ್ಥಾನಗಳಲ್ಲಿ ವಿಜಯ ಸಾಧಿಸಿತ್ತು.