ಸೆನ್ಸೆಕ್ಸ್‌ 80351, ನಿಫ್ಟಿ24433 ಅಂಕಗಳಲ್ಲಿಅಂತ್ಯ: ಹೊಸ ದಾಖಲೆ

| Published : Jul 10 2024, 12:36 AM IST

ಸೆನ್ಸೆಕ್ಸ್‌ 80351, ನಿಫ್ಟಿ24433 ಅಂಕಗಳಲ್ಲಿಅಂತ್ಯ: ಹೊಸ ದಾಖಲೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಮಂಗಳವಾರ 391 ಅಂಕಗಳ ಏರಿಕೆ ಕಂಡು 80351 ಅಂಕಗಳಲ್ಲಿ ಮುಕ್ತಾಯವಾಗಿದೆ.

ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಮಂಗಳವಾರ 391 ಅಂಕಗಳ ಏರಿಕೆ ಕಂಡು 80351 ಅಂಕಗಳಲ್ಲಿ ಮುಕ್ತಾಯವಾಗಿದೆ. ಇನ್ನೊಂದೆಡೆ ನಿಫ್ಟಿ ಕೂಡಾ 112 ಅಂಕ ಏರಿಕೆ ಕಂಡು 24433 ಅಂಕಗಳಲ್ಲಿ ಮುಕ್ತಾಯವಾಗಿದೆ. ಎರಡೂ ಸೂಚ್ಯಂಕಗಳ ಈ ಮಟ್ಟ ಸಾರ್ವಕಾಲಿಕ ಗರಿಷ್ಠವಾಗಿದೆ. ಸ್ಥಳೀಯ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೆಚ್ಚಿನ ಖರೀದಿಗೆ ಮುಂದಾಗಿದ್ದು ಸೂಚ್ಯಂಕ ಉತ್ತಮ ಏರಿಕೆ ಕಾಣುವಂತೆ ಮಾಡಿದೆ. ಎಫ್‌ಎಂಸಿಜಿ ಮತ್ತು ಆಟೋಮೊಬೈಲ್‌ ವಲಯದ ಷೇರುಗಳು ಮಂಗಳವಾರ ಉತ್ತಮ ಏರಿಕೆ ಕಂಡವು. ಮಾರುತಿ ಶೇ.6ರಷ್ಟು ಭರ್ಜರಿ ಏರಿಕೆ ಕಂಡಿತು.

ಲೈಸೆನ್ಸ್‌ ರದ್ದಾದ 14 ಉತ್ಪನ್ನ ಮಾರಾಟ ಸ್ಥಗಿತ: ಸುಪ್ರೀಂಗೆ ಪತಂಜಲಿ ಸಂಸ್ಥೆ ಮಾಹಿತಿ

ನವದೆಹಲಿ: ಉತ್ತರಾಖಂಡ ಸರ್ಕಾರವು ಲೈಸೆನ್ಸ್‌ ರದ್ದುಪಡಿಸಿದ 14 ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸಿರುವುದಾಗಿ ಬಾಬಾ ರಾಮ್‌ದೇವ್‌ ಒಡೆತನದ ಪತಂಜಲಿ ಸಂಸ್ಥೆ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. ಜೊತೆಗೆ ಮಳಿಗೆಗಳಲ್ಲಿ ವ್ಯಾಪಾರವಾಗದೇ ಉಳಿದ ಈ ಉತ್ಪನ್ನಗಳನ್ನು ಮರಳಿಸುವಂತೆ ವ್ಯಾಪಾರಿಗಳಿಗೂ ಸೂಚಿಸಲಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ಪತಂಜಲಿ ಸಂಸ್ಥೆ ತನ್ನ ಉತ್ಪನ್ನಗಳ ಕುರಿತು ದಾರಿ ತಪ್ಪಿಸುವ ಜಾಹೀರಾತು ನೀಡಿದೆ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ ನೀಡಿದ ದೂರು ಆಧರಿಸಿ ಕಳೆದ ಏಪ್ರಿಲ್‌ನಲ್ಲಿ ಉತ್ತರಾಖಂಡ ಸರ್ಕಾರ 14 ಉತ್ಪನ್ನಗಳ ಲೈಸೆನ್ಸ್‌ ರದ್ದು ಮಾಡಿತ್ತು.