ಸೆನ್ಸೆಕ್ಸ್‌: 1240 ಅಂಕಗಳ ಭರ್ಜರಿ ಏರಿಕೆ

| Published : Jan 30 2024, 02:02 AM IST / Updated: Jan 30 2024, 02:03 AM IST

ಸಾರಾಂಶ

ಕಳೆದ ವಾರ ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದ, ಬಾಂಬೆ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ವಾರದ ಮೊದಲ ದಿನವೇ ಭರ್ಜರಿ 1240 ಅಂಕಗಳ ಏರಿಕೆ ಕಂಡಿದೆ. ಈ ಮೂಲಕ 71941 ಅಂಕಗಳಲ್ಲಿ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.

ಮುಂಬೈ: ಕಳೆದ ವಾರ ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದ, ಬಾಂಬೆ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ವಾರದ ಮೊದಲ ದಿನವೇ ಭರ್ಜರಿ 1240 ಅಂಕಗಳ ಏರಿಕೆ ಕಂಡಿದೆ. ಈ ಮೂಲಕ 71941 ಅಂಕಗಳಲ್ಲಿ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.

ಇನ್ನು ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಸಹ 385 ಅಂಕಗಳ ಏರಿಯೊಂದಿಗೆ 21737 ಅಂಕಗಳಲ್ಲಿ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ. ದಿನದ ವಹಿವಾಟಿನ ಸಮಯದಲ್ಲಿ ಸೆನ್ಸೆಕ್ಸ್‌ 72 ಸಾವಿರದ ಗಡಿಯನ್ನು ದಾಟಿದ್ದು, ದಿನದಂತ್ಯಕ್ಕೆ ಕೊಂಚ ಹಿಂದೆ ಸರಿಯಿತು.

ಏಷ್ಯಾ ಮಾರುಕಟ್ಟೆಗಳ ಏರುಗತಿಯೇ ಭಾರತದ ಪೇಟೆ ಏರಿಕೆಗೆ ಕಾರಣವಾಗಿದೆ. ಷೇರುಪೇಟೆ ಏರಿಕೆಯಿಂದ ಹೂಡಿಕೆದಾರರ ಸಂಪತ್ತು ಬರೋಬ್ಬರಿ 6 ಲಕ್ಷ ಕೋಟಿ ರು.ನಷ್ಟು ಏರಿಕೆ ಕಂಡಿದೆ.

ಟಾಟಾ ಮೋಟರ್ಸ್‌, ಪವರ್‌ ಗ್ರಿಡ್‌, ಲಾರ್ಸೆನ್‌ ಅಂಡ್‌ ಟರ್ಬೋ, ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಮತ್ತು ಅಲ್ಟ್ರಾಟೆಕ್‌ ಸಿಮೆಂಟ್‌ ಷೇರುಗಳು ಏರಿಕೆ ಕಂಡವು. ಏಷ್ಯಾದಲ್ಲಿ ಸಿಯೋಲ್‌, ಟೋಕಿಯೋ ಮತ್ತು ಹಾಂಗ್‌ಕಾಂಗ್‌ನ ಮಾರುಕಟ್ಟೆಗಳು ಸಹ ಸೋಮವಾರ ಏರಿಕೆ ಕಂಡವು.