ಸೆನ್ಸೆಕ್ಸ್‌ 76 000 ಐತಿಹಾಸಿಕ ಮಟ್ಟ ತಲುಪಿ ಕೆಳಗಿಳಿದ ಸೂಚ್ಯಂಕ

| Published : May 28 2024, 01:02 AM IST / Updated: May 28 2024, 05:15 AM IST

ಸೆನ್ಸೆಕ್ಸ್‌ 76 000 ಐತಿಹಾಸಿಕ ಮಟ್ಟ ತಲುಪಿ ಕೆಳಗಿಳಿದ ಸೂಚ್ಯಂಕ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಇದೇ ಮೊದಲ ಬಾರಿಗೆ 76000 ಗಡಿಯನ್ನು ಮುಟ್ಟಿದೆ. ಆದರೆ ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಮುಂದಾಗಿದ್ದರಿಂದ ಸೂಚ್ಯಂಕ 76000ರಿಂದ ಕೆಳಕ್ಕೆ ಇಳಿದು ಕೇವಲ 19.89 ಅಂಕ ಏರಿಕೆಯೊಂದಿಗೆ 75390ರಲ್ಲಿ ವಹಿವಾಟು ಮುಕ್ತಾಯಗೊಳಿಸಿದೆ

 ಮುಂಬೈ :  ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಇದೇ ಮೊದಲ ಬಾರಿಗೆ 76000 ಗಡಿಯನ್ನು ಮುಟ್ಟಿದೆ. ಆದರೆ ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಮುಂದಾಗಿದ್ದರಿಂದ ಸೂಚ್ಯಂಕ 76000ರಿಂದ ಕೆಳಕ್ಕೆ ಇಳಿದು ಕೇವಲ 19.89 ಅಂಕ ಏರಿಕೆಯೊಂದಿಗೆ 75390ರಲ್ಲಿ ವಹಿವಾಟು ಮುಕ್ತಾಯಗೊಳಿಸಿದೆ. ಮತ್ತೊಂದೆಡೆ ನಿಫ್ಟಿ ಕೂಡ ಐತಿಹಾಸಿಕ ಮಟ್ಟವಾದ 23110 ತಲುಪಿ ಬಳಿಕ ಕೆಳಕ್ಕೆ ಜಾರಿದೆ.

ಸೋಮವಾರ ಒಂದು ಹಂತದಲ್ಲಿ 599 ಅಂಕ ಏರಿಕೆ ಕಂಡ ಸೆನ್ಸೆಕ್ಸ್‌ 76009ಕ್ಕೆ ತಲುಪಿತು. ಬ್ಯಾಂಕು, ಹಣಕಾಸು ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಷೇರುಗಳ ಏರಿಕೆಯಿಂದಾಗಿ ಸೂಚ್ಯಂಕ ಈ ಐತಿಹಾಸಿಕ ಮಟ್ಟ ಮುಟ್ಟಿತು. ಆದರೆ ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಮುಗಿಬಿದ್ದದ್ದು ಸೂಚ್ಯಂಕವನ್ನು ಕೆಳಕ್ಕೆ ಇಳಿಸಿತು.

ಲೋಕಸಭೆ ಚುನಾವಣೆ ಫಲಿತಾಂಶ ಹಾಗೂ ಜಾಗತಿಕ ಮಾರುಕಟ್ಟೆಗಳು ಏರುಗತಿಯಲ್ಲಿರುವುದರಿಂದ ಸೆನ್ಸೆಕ್ಸ್‌ ಕೂಡ ಸತತ 3ನೇ ದಿನವೂ ಏರಿಕೆ ದಾಖಲಿಸಿದೆ.

75000ದಿಂದ 76000 ಗಡಿಯನ್ನು ಮುಟ್ಟಲು ಸೆನ್ಸೆಕ್ಸ್‌ 31 ವಹಿವಾಟು ದಿನಗಳನ್ನು ತೆಗೆದುಕೊಂಡಿದೆ. ಆದರೆ 74 ಸಾವಿರದಿಂದ 75 ಸಾವಿರ ಗಡಿಯನ್ನು ಕೇವಲ 21 ವಹಿವಾಟಿನ ದಿನಗಳಲ್ಲಿ ತಲುಪಿತ್ತು ಎಂಬುದು ಗಮನಾರ್ಹ.