ಸಾರಾಂಶ
ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಸೆನ್ಸೆಕ್ಸ್ 74 ಸಾವಿರ ಅಂಕಗಳ ಗಡಿ ದಾಟಿ ಹೊಸ ದಾಖಲೆ ಬರೆದಿದೆ.
ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಬುಧವಾರ 408 ಅಂಕಗಳ ಏರಿಕೆ ಕಂಡು 74085ರಲ್ಲಿ ಮುಕ್ತಾಯವಾಗಿದೆ.
ಸೆನ್ಸೆಕ್ಸ್ 74000 ಅಂಕಗಳ ಗಡಿದಾಟಿದ್ದು ಇದೇ ಮೊದಲು ಮತ್ತು ಇದು ಸೆನ್ಸೆಕ್ಸ್‌ನ ಸಾರ್ವಕಾಲಿಕ ಗರಿಷ್ಠ ಕೂಡಾ ಹೌದು.ಇನ್ನೊಂದೆಡೆ ನಿಫ್ಟಿ ಕೂಡಾ 117 ಅಂಕ ಏರಿಕೆ 22474ರಲ್ಲಿ ಮುಕ್ತಾಯವಾಗಿದೆ.
ದಿನದ ಆರಂಭದಲ್ಲಿ ಸೂಚ್ಯಂಕ ಕುಸಿತ ಕಂಡಿತ್ತಾದರೂ ಬಳಿಕ ಯುರೋಪ್ ಮಾರುಕಟ್ಟೆಗಳ ಏರಿಕೆ ಮತ್ತು ಖಾಸಗಿ ಬ್ಯಾಂಕ್ ಮತ್ತು ಫಾರ್ಮಾ ಕಂಪನಿಗಳ ಷೇರುಗಳ ಬೆಲೆ ಏರಿಕೆ ಎರಡು ಸೂಚ್ಯಂಕಗಳ ಏರಿಕೆಗೆ ಕಾರಣವಾಯ್ತು.