ಸಾರಾಂಶ
ಮಂಗಳವಾರ 4389 ಅಂಕ ಬಿದ್ದಿದ್ದ ಸೆನ್ಸೆಕ್ಸ್ ಬುಧವಾರ 2300 ಅಂಕಗಳ ಚೇತರಿಕೆ ಕಂಡು ಸುಧಾರಿಸಿದೆ.
ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಬುಧವಾರ 2303 ಅಂಕಗಳ ಭರ್ಜರಿ ಚೇತರಿಕೆ ಕಂಡು 74382 ಅಂಕಗಳಲ್ಲಿ ಅಂತ್ಯವಾಗಿದೆ.
ಪರಿಣಾಮ ಹೂಡಿಕೆದಾರರ ಸಂಪತ್ತು 13.22 ಲಕ್ಷ ಕೋಟಿ ರು. ನಷ್ಟು ಏರಿಕೆಯಾಗಿದೆ.ಈ ಬಾರಿ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆಯುವುದಿಲ್ಲ ಎಂಬ ಸುದ್ದಿ ಹಿನ್ನೆಲೆಯಲ್ಲಿ ಮಂಗಳವಾರ ಸೆನ್ಸೆಕ್ಸ್ 4389 ಅಂಕಗಳ ಭಾರೀ ಕುಸಿತ ಕಂಡಿತ್ತು.
ಹೀಗಾಗಿ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 31 ಲಕ್ಷ ಕೋಟಿ ರು.ನಷ್ಟು ಕರಗಿ ಹೋಗಿತ್ತು.ಇದೇ ವೇಳೆ ನಿಫ್ಟಿ ಕೂಡಾ 735 ಅಂಕ ಏರಿ 22620ರಲ್ಲಿ ಅಂತ್ಯವಾಯಿತು.
ಬ್ಯಾಂಕಿಂಗ್ ಆಟೋಮೊಬೈಲ್, ತೈಲ ವಲಯದ ಕಂಪನಿಗಳ ಷೇರು ಬೆಲೆ ಬುಧವಾರ ಏರಿಕೆ ಕಂಡಿತು.ಮಂಗಳವಾರ ವಿದೇಶಿ ಸಾಂಸ್ಥಿಕೆ ಹೂಡಿಕೆದಾರರು 12436 ಕೋಟಿ ರು. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.