ಮಂಜಿನ ಮುಸುಕು ಹೊದ್ದ ಉತ್ತರ ಭಾರತ

| Published : Jan 16 2024, 01:51 AM IST / Updated: Jan 16 2024, 01:36 PM IST

ಸಾರಾಂಶ

ಉತ್ತರ ಭಾರತದ ಹಲವೆಡೆ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. ಅದರಲ್ಲೂ ಪಂಜಾಬ್‌ ಮತ್ತು ಹರ್ಯಾಣದಲ್ಲಿ ಶೂನ್ಯದ ಆಸುಪಾಸಿಗೆ ಉಷ್ಣಾಂಶ ಇಳಿದಿದೆ. ಅಲ್ಲದೆ ಶ್ರೀನಗರದಲ್ಲಿ - 4.3 ಡಿಗ್ರಿ, ದಿಲ್ಲೀಲಿ 3.9 ಡಿಗ್ರಿ ತಾಪ ದಾಖಲಾಗಿದೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ತೀವ್ರ ಚಳಿ, ಶೀತಗಾಳಿ ಮುಂದುವರೆದಿದ್ದು ದೆಹಲಿಯಲ್ಲಿ ಸೋಮವಾರ ತಾಪಮಾನ 3.9 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ. 

ಇದೇ ವೇಳೆ ಮತ್ತೆ ದೆಹಲಿಯ ಗಾಳಿಯ ಗುಣಮಟ್ಟ ಕುಸಿಯುತ್ತಿದ್ದು ವಾಯುಗುಣಮಟ್ಟ ಸೂಚ್ಯಂಕ 359ರಷ್ಟು ದಾಖಲಾಗಿದೆ. ಈ ನಡುವೆ ದಟ್ಟ ಮಂಜಿನಿಂದ ಗೋಚರತೆ ಪ್ರಮಾಣವು ಕುಸಿದಿದೆ.

ಇನ್ನು ಜಮ್ಮು ಕಾಶ್ಮೀರದಲ್ಲಿ ಹಲವು ಕಡೆ ತಾಪಮಾನ ಶೂನ್ಯಕ್ಕಿಂತ ಕೆಳಕ್ಕಿಳಿದಿದ್ದು, ಶ್ರೀನಗರದಲ್ಲಿ - 4.3 ಮತ್ತು ಪಹಲ್ಗಾಂನಲ್ಲಿ -5.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಇನ್ನು ಚಂಡೀಗಢದಲ್ಲೂ ತಾಪಮಾನ 0.2ರಷ್ಟು ದಾಖಲಾಗಿದೆ. 

ಅಲ್ಲದೆ ಪಂಜಾಬ್‌ನ ಲುಧಿಯಾನಾದಲ್ಲಿ 1 ಡಿಗ್ರಿ ಸೆಲ್ಸಿಯಸ್‌ ಮತ್ತು ಹರ್‍ಯಾಣದಲ್ಲಿ ಈ ಚಳಿಗಾಲದ ಕನಿಷ್ಠ 1.8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ರಾಜಸ್ಥಾನದ ಸಿಕಾರ್‌ನಲ್ಲಿ 0.9 ಡಿಗ್ರಿ ಮತ್ತು ಜಾರ್ಖಂಡ್‌ನ ಛಾತ್ರಾದಲ್ಲಿ 1.2 (ರಾಜ್ಯದ ಕನಿಷ್ಠ) ಡಿಗ್ರಿ ತಾಪಮಾನ ದಾಖಲಾಗಿದೆ. ಇನ್ನು ಮಂಗಳವಾರವೂ ಇದೇ ರೀತಿ ತಾಪಮಾನ ಮುಂದುವರೆಯುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.