ಸಾರಾಂಶ
ಬಂಗಾಳ ಪೊಲೀಸ್ ವಶದಲ್ಲಿ ಹುಲಿಯಂತಿದ್ದ, ಆದರೆ ಈಗ ಇಲಿಯಂತೆ ಶಾಜಹಾನ್ ಶೇಖ್ ನಡವಳಿಕೆ ಬದಲಾಗಿದೆ ಎಂಬುದಾಗಿ ಬಿಜೆಪಿ ವ್ಯಂಗ್ಯವಾಡಿದೆ. ಇದು ಸಿಬಿಐ ವೈದ್ಯಕೀಯ ಪರೀಕ್ಷೆಯಲ್ಲಿ ಕೂಡ ಬಹಿರಂಗವಾಗಿದೆ.
ಕೋಲ್ಕತಾ: ಮಹಿಳೆಯರಿಗೆ ದೌರ್ಜನ್ಯ ಎಸಗಿ ಬಂಧಿತನಾದರೂ ಕೋರ್ಟ್‌ಗೆ ಎದೆಯುಬ್ಬಿಸಿಕೊಂಡು ಬಂದಿದ್ದ ಸಂದೇಶ್‌ಖಾಲಿ ಡಾನ್ ಶಾಜಹಾನ್ ಶೇಖ್, ಸಿಬಿಐ ವಶಕ್ಕೆ ಪಡೆದ ಬಳಿಕ ಕೆಲವೇ ಗಂಟೆಗಳಲ್ಲಿ ನಡೆ ನುಡಿ ಎಲ್ಲವೂ ಬದಲಾಗಿ ಚಿಂತಾಕ್ರಾಂತ ಸ್ಥಿತಿಯಲ್ಲಿದ್ದಾನೆ ಎಂದು ತಿಳಿದುಬಂದಿದೆ,
ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಅಗ್ನಿಮಿತ್ರ ಪೌಲ್ ವ್ಯಂಗ್ಯವಾಡಿದ್ದು, ‘ಸಂದೇಶ್‌ಖಾಲಿಯ ಹುಲಿ ಸಿಬಿಐ ಬಲೆಗೆ ಬಿದ್ದ ಬಳಿಕ ಇಲಿಯಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ.ಬಂಗಾಳ ಪೊಲೀಸರು ಫೆ.29ರಂದು ಮಾಡಿಸಿದ ವೈದ್ಯಕೀಯ ವರದಿಯಲ್ಲಿ ಶಾಜಹಾನ್ ಹಸನ್ಮುಖಿಯಾಗಿ ವಿಶ್ವಾಸದಿಂದಿರುವುದಾಗಿ ವರದಿ ಬಂದಿತ್ತು. ಅದೇ ಮಾ.6ರಂದು ಸಿಬಿಐ ಮಾಡಿಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಆತ ಚಿಂತಾಕ್ರಾಂತರಾಗಿ ಮೌನಕ್ಕೆ ಶರಣಾಗಿರುವುದಾಗಿ ತಿಳಿಸಲಾಗಿದೆ. ಫೆ.29ರಂದು ಆತ ಬಂಗಾಳ ಪೊಲೀಸರ ವಶದಲ್ಲಿದ್ದ. ಆದರೆ ಈಗ ಮಾ.6ರಿಂದ ಆತ ಸಿಬಿಐ ವಶದಲ್ಲಿದ್ದಾನೆ.