ಸಾರಾಂಶ
ಕಳೆದ ಐದೂವರೆ ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಎನ್‌ಸಿಪಿ ನಾಯಕ ಶರದ್ ಪವಾರ್, ಹಾಲಿ ರಾಜ್ಯಸಭಾ ಅವಧಿ ಮುಗಿದ ಬಳಿಕ ನಿವೃತ್ತಿಯಾಗುವ ಸುಳಿವು ನೀಡಿದ್ದಾರೆ.
ಪುಣೆ: ಕಳೆದ ಐದೂವರೆ ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಎನ್‌ಸಿಪಿ ನಾಯಕ ಶರದ್ ಪವಾರ್, ಹಾಲಿ ರಾಜ್ಯಸಭಾ ಅವಧಿ ಮುಗಿದ ಬಳಿಕ ನಿವೃತ್ತಿಯಾಗುವ ಸುಳಿವು ನೀಡಿದ್ದಾರೆ.
ಬಾರಾಮತಿ ವಿಧಾನಸಭಾ ಕ್ಷೇತ್ರದಲ್ಲಿ ಮೊಮ್ಮಗ ಯುಗೇಂದ್ರ ಪವಾರ್ ಪರ ಮಂಗಳವಾರ ಚುನಾವಣೆ ಪ್ರಚಾರ ಮಾಡಿದ ಶರದ್, ‘ನಾನು 14 ಚುನಾವಣೆ ಎದುರಿಸಿದ್ದೇನೆ. ನೀವು ಒಮ್ಮೆಯೂ ನನ್ನನ್ನು ಮನೆಗೆ ಕಳುಹಿಸಿಲ್ಲ. ಆದರೆ ಇನ್ನು 18 ತಿಂಗಳಲ್ಲಿ ನನ್ನ ರಾಜ್ಯಸಭಾ ಸದಸ್ಯತ್ವ ಮುಕ್ತಾಯವಾಗಲಿದೆ.ಅದಾದ ಬಳಿಕ ಮತ್ತೆ ನಾನು ಚುನಾವಣೆಗೆ ನಿಲ್ಲಬೇಕೋ? ಬೇಡವೋ ಎಂಬುದನ್ನು ಯೋಚಿಸಬೇಕಿದೆ. ಈ ಹಿಂದೆಯೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸದೇ ಇರಲು ನಿರ್ಧರಿಸಿ, ಪಕ್ಷದ ನಾಯಕತ್ವವನ್ನು ಅಜಿತ್ ಪವಾರ್‌ಗೆ ವಹಿಸಿದ್ದೆ. ಆದರೆ ಅವರು ಮತ್ತೊಂದು ಹೊಸ ಪಕ್ಷ ಸ್ಥಾಪಿಸಿದ್ದಾರೆ. ಆದ್ದರಿಂದ ನಾವೀಗ ನಮ್ಮ ಪಕ್ಷವನ್ನು ಮುನ್ನಡೆಸಲು ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಡಬೇಕು’ ಎಂದು ಹೇಳಿದರು.