ಸಾರಾಂಶ
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿಗಳಾದ ಅಜಿತ್ ಪವಾರ್ ಮತ್ತು ದೇವೇಂದ್ರ ಫಡ್ನವೀಸ್ ಅವರನ್ನು ರಾಜಕೀಯ ವೈರತ್ವದ ಮಧ್ಯೆಯೂ ಶರದ್ ಪವಾರ್ ಭೋಜನಕ್ಕೆ ಆಹ್ವಾನಿಸಿ ಸೌಹಾರ್ದತೆ ಮೆರೆದಿದ್ದಾರೆ.
ಪುಣೆ: ಎನ್‌ಸಿಪಿ (ಶರದ್‌ಚಂದ್ರ ಪವಾರ್) ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರನ್ನು ಊಟಕ್ಕೆ ಆಹ್ವಾನಿಸಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಮಾ.2ರಂದು ನಡೆಯಲಿರುವ ‘ನಮೋ ಮಹಾರೋಜ್‌ಗಾರ್ ಮೇಳಾವ್’ನಲ್ಲಿ ಭಾಗಿಯಾಗಲು ಪುಣೆಯ ಬಾರಾಮತಿಗೆ ಭೇಟಿ ನೀಡುತ್ತಿರುವ ಈ ನಾಯಕರನ್ನು ಶರದ್ ಪವಾರ್ ಆಹ್ವಾನಿಸಿದ್ದಾರೆ. ರಾಜಕೀಯ ವಿರೋಧಿಗಳಾದ ಇವರನ್ನು ಊಟಕ್ಕೆ ಆಹ್ವಾನಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಎನ್‌ಸಿಪಿಯಿಂದ ಹೊರಬಂದ ಬಳಿಕ ಅಜಿತ್ ಪವಾರ್ ಹಾಗೂ ಶರದ್ ಪವಾರ್ ಅವರ ನಡುವೆ ಬಿಕ್ಕಟ್ಟು ಉಂಟಾಗಿತ್ತು. ಇದಾದ ಬಳಿಕ ಪಕ್ಷದ ಚಿಹ್ನೆಯೂ ಸಹ ಅಜಿತ್ ಬಣದ ಪಾಲಾಗಿರುವುದರಿಂದ ಈ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗಿತ್ತು.